ಬೆಂಗಳೂರು : ಕರ್ನಾಟಕ ಸ್ಟೇಟ್ ವೈಡ್ ಏರಿಯಾ ನೆಟ್ವರ್ಕ್ ನಲ್ಲಿ (KSWAN) ಭಾರಿ ಗೋಲ್ಮಾಲ್ ನಡೆದಿದೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದು 444 ಕೋಟಿ ರೂಪಾಯಿ ಹಗರಣ ಆಗಿದೆ ಅಂತ ಇದೀಗ ದೂರು ನೀಡಲಾಗಿದೆ. ಇವರ ಜೊತೆಗೆ ಐಎಎಸ್ ಅಧಿಕಾರಿ ಭೂಬಾಲನ್ ವಿರುದ್ಧವು ಕೂಡ ನೀಡಲಾಗಿದೆ ಸಮೇತ ದೂರು ಕೊಟ್ಟಿದ್ದಾರೆ. ಬಿಜೆಪಿ ನಾಯಕ ಎನ್.ಆರ್ ರಮೇಶ್ ದೂರು ಕೊಟ್ಟಿದ್ದಾರೆ.
2005ರಲ್ಲಿ ಕರೆದಿದ್ದ ಟೆಂಡರ್ ನಲ್ಲಿ ಭಾರಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದಾರೆ ಅರ್ಹತೆ ಇಲ್ಲದೆ ಕಂಪನಿಗೆ ಟೆಂಡರ್ ನೀಡಿರುವ ಆರೋಪ ಕೇಳಿ ಬಂದಿದ್ದು ಹೈದರಾಬಾದ್ ಮೂಲದ ಕಂಪನಿಗೆ ಟೆಂಡರ್ ನೀಡಿದ ಆರೋಪ ಕೇಳಿ ಬಂದಿದೆ ಅಂತಿಮ ದಿನದವರೆಗೂ ಕಾಯದೆ ತರಾತುರಿಯಲ್ಲಿ ಟೆಂಡರ್ ನೀಡಲಾಗಿದ್ದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಒಂದು ಟೆಂಡರ್ ನಡೆದಿತ್ತು.
ಸಿಎಂ ಆಗದ ಸಿದ್ದರಾಮಯ್ಯ ಬಳಿಗೆ ಡಿಪಿಎಆರ್ ಇಲಾಖೆ ಇತ್ತು, ಅಣತಿ ಮೇರೆಗೆ ಟೆಂಡರ್ ನೀಡಲಾಗಿದೆ. ಭೂ ಬಾಲನ್ ಸೇರಿದಂತೆ ಮೂವರು ಅಧಿಕಾರಿಗಳ ವಿರುದ್ಧವು ಎನ್ ಆರ್ ರಮೇಶ್ ದೂರು ನೀಡಿದ್ದಾರೆ. ಈ ಗವರ್ನೆನ್ಸ್ ವಿಭಾಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭೂಬಾಲನ್, ಸಚಿವ ಯತೀಂದ್ರ ಸಿದ್ದರಾಮಯ್ಯ ಸೇರಿದಂತೆ ಅಧಿಕಾರಿಗಳ ವಿರುದ್ಧ ಈಗ ತನಿಖೆಗೆ ಆಗ್ರಹಿಸಲಾಗಿದೆ.