ಬೆಂಗಳೂರು : ಕೆಪಿಎಸ್‌ಸಿ ಇಂದ ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಹಗರಣಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್ ಎಸ್ಐಟಿ ರಚಿಸಿದರೆ ಕಾಂಗ್ರೆಸ್ಗೆ ಭೀತಿ ಯಾಕೆ? ನಿಮ್ಮದೇ ಐಪಿಎಸ್ ಅಧಿಕಾರಿಗಳೇ ನಿಮಗೆ ನಂಬಿಕೆ ಇಲ್ಲವಾ? ಎಸ್ಐಟಿ ರಚನೆ ಪ್ರಶ್ನೆ ಪ್ರಶ್ನಿಸಿ ಯಾಕೆ ಸುಪ್ರೀಂಕೋರ್ಟ್ ಗೆ ಹೋಗಿದ್ದು ಯಾಕೆ? ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಎಂಎಲ್ಸಿ ಸಿಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ಸಿಎಂ ಕಾರ್ಯಾಲಯದ ಹಿರಿಯ ಅಧಿಕಾರಿ ಹಗರಣದಲ್ಲಿ ಇದ್ದಾರೆ ಮೂರ್ನಾಲ್ಕು ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ. ಕಾರ್ಯದರ್ಶಿಕ ತನಿಖೆಯಾದರೆ ಬಹಿರಂಗ ಆಗುತ್ತದೆ ಎಂದು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ ರಾಜ್ಯದಲ್ಲಿ ನಡೆದ ಕೃತ್ಯ ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಆಗಿದ್ದರೆ ಕಾಂಗ್ರೆಸ್ ಅವಧಿಯಲ್ಲಾದ ಕೊಲೆ ಬಿಜೆಪಿ ಸರ್ಕಾರದಲ್ಲಿ ಆಗಿರುತ್ತಿದ್ದರೆ, ಈಗ ನಾವು ನಿಮ್ಮನ್ನು ಏನಂತ ಕರಿಬೇಕು? ಸೋನಿಯಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧವು ಆರೋಪ ಇದೆ. ರಾಜ್ಯದ ಮುಖ್ಯಮಂತ್ರಿ ಮೇಲೂ ಆರೋಪ ಇದೆ. ಸಚಿವರು ಮತ್ತು ಹಿರಿಯ ಅಧಿಕಾರಿಗಳ ರಕ್ಷಣೆಗೆ ಎಸ್ಐಟಿ ರಚನೆಗೆ ಸರ್ಕಾರ ವಿರೋಧ ವ್ಯಕ್ತಪಡಿಸಿದೆ ಎಂದು ಬೆಂಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಸಿಟಿ ರವಿ ವಾಗ್ದಾಳಿ ನಡೆಸಿದರು.