ಬೀದರ್ : ಪಾಕಿಸ್ತಾನದ ಉಗ್ರ ಸಂಘಟನೆ ಜೊತೆಗೆ ಸಂಪರ್ಕ ಹೊಂದಿದ್ದ ಬೀದರ್ ಜಿಲ್ಲೆಯ ಬಾಲ್ಕೀಯ ವಿಶಾಲ್ ಮೇತ್ರೆ ಬಂಧನದ ಬೆನ್ನಲ್ಲೇ ಏಳಕೂರಿನ ವಿಶಾಲ ಮೇತ್ರೆ ಸೇರಿದಂತೆ 7 ಜನರ ವಿರುದ್ಧ FIR ದಾಖಲಾಗಿದೆ.
ಪಾಕಿಸ್ತಾನದ ಶಹಜಾದ್ ಭಟ್ಟಿ ನೋಮಿ ಖಾನ್ ಹೈನ ಯುಪಿಯ ಅಶು ಶರ್ಮ ರಾಜೀವ್ ಸೇರಿದಂತೆ ಏಳು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಟಕ ಚಿಂಚೋಳಿ ಠಾಣೆಯಲ್ಲಿ 7 ಜನರ ವಿರುದ್ಧ ಸ್ವಯಂ ಪ್ರೇರಿತ ದೂರು ದಾಖಲಾಗಿದೆ. ಆರೋಪಿ ವಿಶಾಲ್ ಮೇತ್ರೆಗೆ ಸಂಬಂಧಿಸಿದಂತೆ ಸ್ಪೋಟಕ ಅಂಶಗಳು ಉಲ್ಲೇಖ ಮಾಡಿದ್ದು, ವಾಟ್ಸಾಪ್ ಹಾಗು ಇನ್ಸ್ಟಾಲ್ ಮೂಲಕ ಪಾಕಿಸ್ತಾನ ಗೃಹ ಸಂಪರ್ಕ ಹೊಂದಿರುವ ಕುರಿತು ಉಲ್ಲೆಖಿಸಲಾಗಿದೆ.