ಬೆಂಗಳೂರು : ವಿಜಯಪುರ ಜಿಲ್ಲೆಯ ಇಂಡಿ ಹಾಗೂ ಚಡಚಣ ತಾಲ್ಲೂಕುಗಳನ್ನು ಬರಪಟ್ಟಿಗೆ ಸೇರಿಸಿಲ್ಲ ಎಂದು ಅಸಮಾಧಾನಗೊಂಡಿದ್ದ ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಅವರು ನಿನ್ನೆ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಯಶವಂತರಾಯ ಗೌಡ ಪಾಟೀಲ್ ರಾಜಿನಾಮೆ ನೀಡಿದ ಬೆನ್ನೆಲ್ಲೆ, ರಾಜ್ಯ ಸರ್ಕಾರ ಇಂಡಿ ತಾಲೂಕು ಕೂಡ ಬರಪಟ್ಟಿಗೆ ಸೇರ್ಪಡೆಗೊಳಿಸಿದೆ.
ಈ ಕುರಿತಂತೆ ಗ್ರೌಂಡ್ ಟ್ರೂಥಿಂಗ್ ನೋಟಿಫಿಕೇಶನ್ ಹೊರಡಿಸಿದ ರಾಜ್ಯ ಸರ್ಕಾರ, ಗ್ರೌಂಡ್ ಟ್ರೂಥಿಂಗ್ ಗೆ ಮತ್ತೆ 29 ತಾಲೂಕುಗಳನ್ನು ಬರಪಟ್ಟಿಗೆ ಸೇರ್ಪಡೆ ಮಾಡಿ ಆದೇಶ ಹೊರಡಿಸಿದೆ. ಆ ಪ್ರಕಾರವಾಗಿ ಒಟ್ಟು ಮತ್ತೆ ಹೊಸದಾಗಿ 29 ತಾಲೂಕುಗಳನ್ನು ಬರಪಟ್ಟಿಗೆ ರಾಜ್ಯ ಸರ್ಕಾರ ಸೇರ್ಪಡೆಗೊಳಿಸಿದೆ. ಆ ಒಂದು 29 ತಾಲೂಕುಗಳ ಪೈಕಿ ಇಂಡಿ ತಾಲೂಕು ಕೂಡ ಸೇರ್ಪಡೆ ಮಾಡಲಾಗಿದೆ.