LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ನಾಳೆಯಿಂದ ಮನೆ ಮನೆಗೆ BLO ಗಳು ಭೇಟಿ: SIR ಬಗ್ಗೆ ಮಾಹಿತಿ ನೀಡಿದ ರಾಜ್ಯ ಚುನಾವಣಾಧಿಕಾರು ಅನ್ಬುಕುಮಾರ್

ಬೆಂಗಳೂರು: ರಾಜ್ಯದಲ್ಲಿ ನಾಳೆ ಜೂನ್​​ 30ರಿಂದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ (SIR) ಆರಂಭವಾಗಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಆಯೋಗ ಅಗತ್ಯ ತಯಾರಿ ಮಾಡಿಕೊಂಡಿದೆ. ರಾಜ್ಯದಲ್ಲಿ ಪ್ರಸ್ತುತ ಒಟ್ಟು 5,54,32,314 ಮತದಾರಿದ್ದು, ಎಲ್ಲರು ವಿಶೇಷ ಸಮಗ್ರ ಪರಿಷ್ಕರಣೆಗೆ ಒಳಪಡಲಿದ್ದಾರೆ. ಈಗಾಗಲೇ ಶೇ 91.61ನಷ್ಟು ಮತದಾರರು ಮ್ಯಾಪಿಂಗ್‌ಗೆ ಒಳಪಟ್ಟಿದ್ದಾರೆ. 46,52,504 ಮ್ಯಾಪಿಂಗ್‌ನಿಂದ ಹೊರ ಉಳಿದಿದ್ದಾರೆ ಎಂದು ಮಾಹಿತಿ ನೀಡಿದರು.

ನಾಳೆಯಿಂದ ಜುಲೈ 29ರವರೆಗೆ ರಾಜ್ಯದಲ್ಲಿ SIR ಪ್ರಕ್ರಿಯೆ ನಡೆಯುತ್ತೆ. BLOಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡುತ್ತಾರೆ. ಆಗಸ್ಟ್​ 5ರಂದು ಮತದಾರರ ಕರಡು ಪಟ್ಟಿ ಬಿಡುಗಡೆ ಮಾಡಲಾಗುವುದು. ಆಗಸ್ಟ್ 5ರಿಂದ ಸೆಪ್ಟೆಂಬರ್ 4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ನಂತರ ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ಮಾಡಲಾಗುತ್ತೆ ಎಂದು ತಿಳಿಸಿದರು.

ಇನ್ನು ರಾಜ್ಯದಾದ್ಯಂತ 59,050 ಬೂತ್ ಮಟ್ಟದ ಅಧಿಕಾರಿಗಳ ನಿಯೋಜಿಸಲಾಗಿದೆ. 31 ಜಿಲ್ಲಾ ಚುನಾವಣಾಧಿಕಾರಿಗಳು, 4 ಅಪರ ಜಿಲ್ಲಾ ಚುನಾವಣಾಧಿಕಾರಿಗಳು, 224 ನೋಂಣಾಧಿಕಾರಿಗಳು, 336 ಸಹಾಯಕ ನೋಂದಣಾಧಿಕಾರಿಗಳು, 7556 BLOಗಳು, 1,15,112 ಬಿಎಲ್​ಎಗಳ ನೇಮಕ ಮಾಡಲಾಗಿದೆ ಎಂದು ಹೇಳಿದರು.

ನಮೂನೆಯನ್ನು ಏನು ಮಾಡಬೇಕು?
BLOಗಳು ಮನೆ ಮನೆಗೆ ಭೇಟಿ ನೀಡಿ ಗಣತಿ ನಮೂನೆ ವಿತರಣೆ ಮಾಡುತ್ತಾರೆ. ಭರ್ತಿ ಮಾಡಿದ ನಮೂನೆಗಳನ್ನು BLOಗಳು ಡಿಜಿಟಲೀಕರಣಕ್ಕೆ ಕಳಿಸುತ್ತಾರೆ. ಮನೆಗೆ ಅರ್ಜಿ ನೀಡಿದ ಬಳಿಕ ಮನೆಗಳಿಗೆ ಸ್ಟಿಕ್ಕರ್​ ಅಂಟಿಸಲಾಗುತ್ತದೆ. ಎನ್ಯೂಮರೇಷನ್ ಫಾರ್ಮ್ ಭರ್ತಿ ದಯವಿಟ್ಟು ಬಿಎಲ್​ಒಗಳಿಗೆ ವಾಪಸ್ ಕೊಡಬೇಕು. ಭರ್ತಿ ಮಾಡಿದ ನಮೂನೆ ಪಡೆಯಲು ಅಗತ್ಯವಿದ್ದರೆ ಕನಿಷ್ಟ ಮೂರು ಬಾರಿ ಅಧಿಕಾರಿಗಳು ಮನೆಗೆ ಭೇಟಿ ನೀಡುತ್ತಾರೆ. ರಾಜ್ಯದಲ್ಲಿ 1 ಕೋಟಿ 88 ಲಕ್ಷ ಮನೆಗಳಿವೆ ಎಂದರು.

ಬಿಎಲ್​ಒ, BLAಗಳ ನಂಬರ್ ಕೂಡ ಆಯೋಗದ ವೆಬ್​ಸೈಟ್​ನಲ್ಲಿದೆ. ಬಿಎಲ್​ಒಗಳಿಗೆ ಯಾವುದೇ ದಾಖಲೆ ಕೊಡಬಾರದು. SIR ಬಗ್ಗೆ ಪ್ರತಿದಿನ ಅಪ್​ಡೇಟ್ ಕೊಡುತ್ತೇವೆ. ಎಷ್ಟು ಮನೆಗೆ ಭೇಟಿ ಕೊಟ್ಟಿದ್ದೇವೆ, ಎಷ್ಟು ಮತದಾರರು ಮೃತಪಟ್ಟಿದ್ದಾರೆ. ಎಷ್ಟು ಫಾರ್ಮ್ ಕೊಟ್ಟಿದ್ದೇವೆ, ಎಷ್ಟು ಮನೆಗೆ ಭೇಟಿ ಕೊಟ್ಟಿದ್ದೇವೆ, ಎಷ್ಟು ಮತದಾರರು ಮೃತಪಟ್ಟಿದ್ದಾರೆ ಹೀಗೆ ಪ್ರತಿಯೊಂದು ಮಾಹಿತಿಯನ್ನು ಅಪ್​ಡೇಟ್ ಮಾಡುತ್ತೇವೆ. ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ವೋಟರ್ ಫೆಸಿಲಿಟಿ ಸೆಂಟರ್ ಇರುತ್ತೆ. ತಾಲೂಕು ವ್ಯಾಪ್ತಿಯಲ್ಲಿ ಬಿಎಲ್​ಒ ಅನುಕೂಲಕ್ಕಾಗಿ ಸೆಂಟರ್ ಇರುತ್ತೆ. ಇನ್ನು SIR ಸಂದರ್ಭದಲ್ಲಿ ನೆಟ್​ವರ್ಕ್, ಟೆಕ್ನಿಕಲ್‌ ಸಮಸ್ಯೆಯಾದಂತೆ ಸಿದ್ಧತೆಯಾಗಿದೆ. ನೆಟ್​ವರ್ಕ್ ಇಲ್ಲದ ಕಡೆ ಬಿಎಲ್​ಒಗಳಿಗೆ ವೈ-ಫೈ ಸೌಲಭ್ಯ ಕೊಟ್ಟಿದ್ದೇವೆ ಎಂದು ಹೇಳಿದರು.

ಎನ್ಯೂಮರೇಷನ್ ಫಾರ್ಮ್​ಗೆ ಆ ಕುಟುಂಬದ ಯಾರು ಬೇಕಾದರು ಸಹಿ ಹಾಕಬಹುದು. ಆ ಅರ್ಜಿಯ ಮತದಾರ ಹೊರಗಡೆ ಹೋಗಿದ್ದರೆ, ಗಂಡನ ಪರವಾಗಿ ಹೆಂಡತಿ ಅಥವಾ ಅಕ್ಕನ ಪರವಾಗಿ ಸಹೋದರ ಸಹಿ ಮಾಡಬಹುದು. BLOಗಳಿಗೆ ನಿಗದಿತ ಸಮಯ ಇಲ್ಲ. ಮ್ಯಾಪಿಂಗ್ ಮಾಡಿದ ಸಮಯವನ್ನ ಆಧರಿಸಿ ಕೆಲವೊಂದು ಏರಿಯಾ, ಜಿಲ್ಲೆಗಳಿಗೆ ಅನುಗುಣವಾಗಿ ನಿರ್ಧಾರ ಮಾಡುತ್ತಾರೆ ಎಂದು ಮಾಹಿತಿ ನೀಡಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ತರಬೇತಿ ವಿಮಾನ ಪತನ, ಮಹಿಳಾ ಪೈಲಟ್ ಗೆ ಗಾಯ | ವಿಡಿಯೋರಾಮಮಂದಿರ ಹುಂಡಿ ಕದ್ದ ಆರೋಪದಲ್ಲಿ ಬಂಧಿಸಲ್ಪಟ್ಟ ಆರೋಪಿಗಳ ಪರ ವಾದ ಮಾಡದಿರಲು ನಿರ್ಧರಿಸಿದ ವಕೀಲರುBREAKING: ಟೈಯರ್ ಸ್ಪೋಟಗೊಂಡು ಸಾರಿಗೆ ಬಸ್ ಪಲ್ಟಿ: ಇಬ್ಬರು ಸ್ಥಳದಲ್ಲೇ ಸಾವು, 50 ಮಂದಿಗೆ ಗಾಯBIG NEWS: ತ್ರಿಭಾಷಾ ನೀತಿ ಸಡಿಲಗೊಳಿಸಿದ ಸಿಬಿಎಸ್‌ಇ: 1 ಬಾರಿ 3ನೇ ಭಾಷೆಯ ಬೋರ್ಡ್ ಪರೀಕ್ಷೆ ಇಲ್ಲ: ಇಲ್ಲಿದೆ ಮಾರ್ಗಸೂಚಿನಾಳೆಯಿಂದ ಮನೆ ಮನೆಗೆ BLO ಗಳು ಭೇಟಿ: SIR ಬಗ್ಗೆ ಮಾಹಿತಿ ನೀಡಿದ ರಾಜ್ಯ ಚುನಾವಣಾಧಿಕಾರು ಅನ್ಬುಕುಮಾರ್ವಿದ್ಯುತ್ ಸರಬರಾಜು ಖಾಸಗೀಕರಣ ಪ್ರಶ್ನೆಯೇ ಇಲ್ಲ: ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟನೆಪ್ರಿಯಾ ಸುದೀಪ್ ನಿರ್ಮಾಣದ ಸಿನಿಮಾದಲ್ಲಿ ನಿಮ್ಮ ಕಥೆಗೆ ಅವಕಾಶ ಹೊಸ ಪ್ರತಿಭೆಗಳಿಗೆ ಗೋಲ್ಡನ್ ಚಾನ್ಸ್ನಾಳೆಯಿಂದ SIR ಆರಂಭ: ಮನೆ ಮನೆಗೂ ಭೇಟಿ ನೀಡಲಿದ್ದಾರೆ ಚುನಾವಣಾಧಿಕಾರಿಗಳು: ಜಿಬಿಎ ಆಯುಕ್ತ ಮಹೇಶ್ವರ್ ರಾವ್ ಮಾಹಿತಿಮೊದಲು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಲಿ; ಬಳಿಕ ಚುನವಣಾ ಆಯೋಗ SIR ಆರಂಭಿಸಲಿ: ಸಚಿವ ಪ್ರಿಯಾಂಕ್ ಖರ್ಗೆBREAKING: ಅಬಕಾರಿ ಡಿಸಿ ಕಚೇರಿಗಳ ಮೇಲೆ ಲೋಕಾಯುಕ್ತ ದಿಢೀರ್ ದಾಳಿ