LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

BIG NEWS : ಷೇರು ಮಾರಾಟದ ಲಾಭ ಪತಿಯ ಆದಾಯವೇ ; ಹೆಂಡತಿ-ಮಗುವಿಗೆ ಜೀವನಾಂಶ 1.20 ಲಕ್ಷ ರೂ.ಗೆ ಹೆಚ್ಚಿಸಿದ ಹೈಕೋರ್ಟ್

ಬೆಂಗಳೂರು: ಷೇರುಗಳ ಮಾರಾಟದಿಂದ ಬರುವ ಲಾಭವು ಪತಿಯ ಒಟ್ಟು ಆದಾಯದ ಭಾಗವೇ ಆಗಿರುತ್ತದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ಅಭಿಪ್ರಾಯ ವ್ಯಕ್ತಪಡಿಸಿದೆ. ಇಂತಹ ಆದಾಯವನ್ನು ಮರೆಮಾಚಿ ಪತ್ನಿ ಮತ್ತು ಮಗುವಿಗೆ ನೀಡಬೇಕಾದ ಕಡ್ಡಾಯ ಜೀವನಾಂಶದ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ನ್ಯಾಯಪೀಠ, ಕೌಟುಂಬಿಕ ನ್ಯಾಯಾಲಯ ಈ ಮೊದಲು ಆದೇಶಿಸಿದ್ದ ಮಾಸಿಕ ಜೀವನಾಂಶದ ಮೊತ್ತವನ್ನು 50,000 ರೂಪಾಯಿಯಿಂದ 1.20 ಲಕ್ಷ ರೂಪಾಯಿಗೆ ಹೆಚ್ಚಿಸಿ ಮಹತ್ವದ ತೀರ್ಪು ನೀಡಿದೆ.

ಕೌಟುಂಬಿಕ ನ್ಯಾಯಾಲಯ ನೀಡಿದ್ದ ಮಾಸಿಕ 50 ಸಾವಿರ ರೂಪಾಯಿ ಜೀವನಾಂಶದ ಆದೇಶವನ್ನು ಪ್ರಶ್ನಿಸಿ ಪತಿ ಜೀವನಾಂಶ ತಗ್ಗಿಸಲು ಮತ್ತು ಪತ್ನಿ ಜೀವನಾಂಶ ಹೆಚ್ಚಿಸಲು ಕೋರಿ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಲಲಿತಾ ಕನ್ನೆಗಂಟಿ ಅವರಿದ್ದ ಏಕಸದಸ್ಯ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಮಾರ್ಪಡಿಸಿ ಈ ತೀರ್ಪು ನೀಡಿದೆ. ಷೇರು ವ್ಯವಹಾರದ ಹಣ ಪ್ರತಿ ತಿಂಗಳು ಬ್ಯಾಂಕ್ ಖಾತೆಗೆ ಜಮೆಯಾಗದಿದ್ದರೂ, ವಾರ್ಷಿಕವಾಗಿ ಬೃಹತ್ ಮೊತ್ತದ ಆದಾಯ ತರುವುದರಿಂದ ಅದನ್ನು ಆರ್ಥಿಕ ಸಾಮರ್ಥ್ಯದ ಲೆಕ್ಕಾಚಾರದಿಂದ ಹೊರಗಿಡಲು ಬರುವುದಿಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಪೀಠವು ಪತ್ನಿಯ ಆರೋಗ್ಯ ಸ್ಥಿತಿಯನ್ನು ವಿಶೇಷವಾಗಿ ಪರಿಗಣಿಸಿದೆ. ಪತ್ನಿಯು ಪ್ರಸ್ತುತ ಉದ್ಯೋಗ ಕಳೆದುಕೊಂಡಿದ್ದು, ಗ್ಲಾಕೋಮಾ (ಕಣ್ಣಿನ ಸಮಸ್ಯೆ) ಮತ್ತು 'ಆಟೋಇಮ್ಯೂನ್' ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದರಿಂದಾಗಿ ಅವರು ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಪೀಠ, ಪತ್ನಿಯ ವೈದ್ಯಕೀಯ ಮತ್ತು ದಿನನಿತ್ಯದ ನಿರ್ವಹಣಾ ವೆಚ್ಚಗಳನ್ನು ಸರಿದೂಗಿಸಲು ಜೀವನಾಂಶದ ಮೊತ್ತವನ್ನು ಹೆಚ್ಚಿಸುವುದು ಸಮಂಜಸವಾಗಿದೆ ಎಂದು ನಿರ್ಧರಿಸಿತು.

ವಿಚಾರಣೆ ವೇಳೆ ಪತಿಯ ಪರ ವಕೀಲರು, ಪತಿಯ ಮೂಲ ವೇತನ 2.91 ಲಕ್ಷ ರೂಪಾಯಿಯಾಗಿದ್ದು, ಸಾಲದ ಇಎಂಐ ಹಾಗೂ ಪೋಷಕರ ವೆಚ್ಚ ಕಳೆದ ನಂತರ ಅವರ ಬಳಿ 50,000 ರೂಪಾಯಿ ಮಾತ್ರ ಉಳಿಯುತ್ತದೆ, ಅಲ್ಲದೆ ಷೇರು ಮಾರಾಟದ ಲಾಭವು ನಿಯಮಿತ ವೇತನವಲ್ಲ ಎಂದು ವಾದಿಸಿದ್ದರು. ಆದರೆ ಈ ವಾದವನ್ನು ತಳ್ಳಿಹಾಕಿದ ಹೈಕೋರ್ಟ್, ಸಾಲದ ಇಎಂಐ ಪಾವತಿಸುವುದು ಸ್ವಂತ ಆಸ್ತಿ ಸೃಷ್ಟಿಯ ಭಾಗವೇ ಹೊರತು ಅದನ್ನು ಜೀವನಾಂಶ ನೀಡದಿರಲು ನೆಪವಾಗಿ ಬಳಸುವಂತಿಲ್ಲ. ಪತ್ನಿ ಪರ ವಕೀಲರು ಸಲ್ಲಿಸಿದ ದಾಖಲೆಗಳ ಪ್ರಕಾರ ಪತಿಯ ವಾರ್ಷಿಕ ಆದಾಯ 91 ಲಕ್ಷಕ್ಕೂ ಹೆಚ್ಚಿದ್ದು, ಕಂಪನಿಯ ಸ್ಟಾಕ್ ಆಪ್ಷನ್ ಮೂಲಕವೇ ವಾರ್ಷಿಕ 20 ರಿಂದ 28 ಲಕ್ಷ ರೂ. ಲಾಭ ಗಳಿಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿತು.

ನ್ಯಾಯಪೀಠವು ತನ್ನ ಆದೇಶದಲ್ಲಿ, ಅರ್ಜಿಯನ್ನು ಸಲ್ಲಿಸಿದ ದಿನಾಂಕದಿಂದ ಪತ್ನಿ ಕೆಲಸದಲ್ಲಿದ್ದ ಅವಧಿಯವರೆಗೆ ಮಾಸಿಕ 30,000 ರೂಪಾಯಿ ಹಾಗೂ ಕೆಲಸ ಕಳೆದುಕೊಂಡ ನಂತರದ ದಿನದಿಂದ ಮಾಸಿಕ 1.20 ಲಕ್ಷ ರೂಪಾಯಿ ಜೀವನಾಂಶವನ್ನು ಕೌಟುಂಬಿಕ ನ್ಯಾಯಾಲಯದ ಆದೇಶದ ದಿನಾಂಕದಿಂದ ಲೆಕ್ಕ ಹಾಕಿ ಪಾವತಿಸಬೇಕು ಎಂದು ನಿರ್ದೇಶಿಸಿದೆ. ಇದರೊಂದಿಗೆ ಮಗುವಿನ ಶಿಕ್ಷಣ ಮತ್ತು ಶಾಲಾ ವೆಚ್ಚಗಳನ್ನು ಸಂಪೂರ್ಣವಾಗಿ ಪತಿಯೇ ಭರಿಸಬೇಕು ಹಾಗೂ ಎಲ್ಲಾ ಬಾಕಿ ಮೊತ್ತವನ್ನು ಆದೇಶ ಹೊರಬಿದ್ದ 4 ವಾರಗಳ ಒಳಗೆ ಪತ್ನಿಯ ಖಾತೆಗೆ ಜಮೆ ಮಾಡಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಬೆಂಗಳೂರಿನ ಜೆ.ಪಿ. ನಗರದ ನಿವಾಸಿಯಾದ ಪತಿ ಪ್ರಸಿದ್ಧ 'ಸಿಟಿ ಸಿಸ್ಕೋ' ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದು, ದಂಪತಿಯ ವಿಚ್ಛೇದನ ಅರ್ಜಿ ಪ್ರಸ್ತುತ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿದೆ. ಈ ಹಿಂದೆ ಕೌಟುಂಬಿಕ ನ್ಯಾಯಾಲಯವು ಮಾಸಿಕ 50,000 ರೂಪಾಯಿ ಜೀವನಾಂಶ ಹಾಗೂ ಮಗುವಿನ ಶಾಲಾ ಶುಲ್ಕ ಪಾವತಿಸಲು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಉಭಯತರರು ಹೈಕೋರ್ಟ್ ಮೆಟ್ಟಿಲೇರಿದ್ದು, ಇದೀಗ ಹೈಕೋರ್ಟ್ ಪತ್ನಿಯ ಪರವಾಗಿ ತೀರ್ಪು ನೀಡಿ ಆದೇಶ ಪರಿಷ್ಕರಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್