LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ARTO ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳ ದಾಳಿ: 13 ಕೆಜಿ ಚಿನ್ನ, 9 ಕೆಜಿ ಬೆಳ್ಳಿ, ವಜ್ರದ ಆಭರಣ ಪತ್ತೆ; ಬರೋಬ್ಬರಿ 20 ಕೋಟಿ ಮೌಲ್ಯದ ಆಭರಣ ಕಂಡು ದಂಗಾದ ಅಧಿಕಾರಿಗಳು

ಲಕ್ನೋ: ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿ (ARTO) ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದು, ಈ ವೇಳೆ ಪತ್ತೆಯಾದ 20 ಕೋಟಿ ಮೌಲ್ಯದ ಚಿನ್ನಾಭರಣ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.

ಎಆರ್ ಟಿಒ ಅಧಿಕಾರಿ ಲಲಿತ್ ಕುಮಾರ್ ಲಕ್ನೋ ನಿವಾಸದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ನಿವೃತ್ತ ಅಧಿಕಾರಿ ಬಳಿ ಸಿಕ್ಕ ಆಸ್ತಿ ಅಧಿಕಾರಿಗಳನ್ನು ದಂಘಾಗುವಂತೆ ಮಾಡಿದೆ.

ಸುಮಾರು 26 ಗಂಟೆಗಳ ಕಾಲ ನಡೆದ ಶೋಧ ಕಾರ್ಯಾಚರಣೆ ಬಳಿಕ ಲಲಿತ್‌ ಮನೆಯಿಂದ 13 ಕೆಜಿ ಚಿನ್ನ, 9 ಕೆಜಿ ಬೆಳ್ಳಿ ಮತ್ತು ವಜ್ರದ ಆಭರಣಗಳು ಸೇರಿ 20 ಕೋಟಿ ಮೌಲ್ಯದ ಆಭರಣಗಳನ್ನು ವಶಪಡಿಕೊಂಡಿದ್ದಾರೆ. ಜೊತೆಗೆ ಮನೆಗಳು, ಫ್ಲಾಟ್‌ಗಳು ಮತ್ತು ಕೃಷಿ ಭೂಮಿ ಸೇರಿದಂತೆ 15 ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳು ಪತ್ತೆಯಾಗಿವೆ. ವಿಜಿಲೆನ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಆಸ್ತಿಗಳ ಒಟ್ಟು ಮೌಲ್ಯ ಸುಮಾರು 35 ಕೋಟಿ ರೂ. ಎಂದು ಅಂದಾಜಿಸಿದ್ದಾರೆ.

ಲಲಿತ್ ಕುಮಾರ್ ಉತ್ತರ ಪ್ರದೇಶದ ಸಾರಿಗೆ ಇಲಾಖೆಯಲ್ಲಿ ಎಆರ್‌ಟಿಒ (ARTO) ಆಗಿ ಕೆಲಸ ನಿರ್ವಹಿಸಿ ನಿವೃತ್ತರಾಗಿದ್ದರು. ಕಾನ್ಪುರದಲ್ಲಿ ಎಆರ್‌ಟಿಒ ಆಗಿದ್ದಾಗ ಅವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಾಗಿತ್ತು. 2020 ರ ಸೆಪ್ಟೆಂಬರ್ 11 ರಂದು ಭ್ರಷ್ಟಾಚಾರ ನಿಗ್ರಹ ಸಂಸ್ಥೆಗೆ ಈ ಪ್ರಕರಣದ ಕುರಿತು ಲಲಿತ್ ಕುಮಾರ್ ವಿರುದ್ಧ ತನಿಖೆ ನಡೆಸಲು ಅನುಮತಿ ನೀಡಿತ್ತು. ಕಾನ್ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಲಲಿತ್ ಕುಮಾರ್ ಅಕ್ರಮವಾಗಿ 93.26 ಲಕ್ಷ ರೂ. ಆದಾಯ ಗಳಿಸಿದ್ದಾರೆ ಎಂದು ವಿಜಿಲೆನ್ಸ್ ತನಿಖೆಯಿಂದ ತಿಳಿದುಬಂದಿತ್ತು.

ಲಲಿತ್ ಕುಮಾರ್ ಅವರು ಸ್ಥಿರಾಸ್ತಿ ಮತ್ತು ಚರಾಸ್ತಿ ಮತ್ತು ನಿರ್ವಹಣೆಗಾಗಿ 1.61 ಕೋಟಿ ರೂ. ಖರ್ಚು ಮಾಡಿದ್ದಾರೆ. ಆದಾಯಕ್ಕಿಂತ 68.66 ಲಕ್ಷರೂ. ಖರ್ಚು ಮಾಡಲಾಗಿದೆ ಎಂದು ವಿಜೆಲೆನ್ಸ್‌ ಗಮನಿಸಿತ್ತು. ಇದೇ ವೇಳೆ 2022 ರ ಜೂನ್‌ನಲ್ಲಿ ಆಗ್ರಾದಲ್ಲಿ ARTO ಆಗಿ ನೇಮಿಸಿದ್ದಾಗಲೂ ಲಲಿತ್‌ ಲಲಿತ್‌ ಅಕ್ರಮ ನಡೆಸಿದ್ದಾರೆ ಅನ್ನೋದು ಬೆಳಕಿಗೆ ಬಂದಿದೆ.

ಜುಲೈ 7 ಮತ್ತು 8 ರಂದು ಅಲಿಗಂಜ್‌ನ ಚಂದ್ರಲೋಕ್ ಕಾಲೋನಿಯಲ್ಲಿರುವ ಲಲಿತ್‌ ಅವರ ಸಿ-143 ನಿವಾಸದ ಮೇಲೆ ವಿಜಿಲೆನ್ಸ್ ತಂಡವು ದಾಳಿ ನಡೆಸಿತು. ಸುಮಾರು 26 ಗಂಟೆಗಳ ಕಾಲ ಶೋಧ ನಡೆಸಲಾಯಿತು. ಈ ವೇಳೆ ಪ್ಯಾಕೆಟ್‌ ಮಾಡಿ ಮನೆಯ ಗೋಡೆ ಸೇರಿದಂತೆ ಹಲವು ಕಡೆಗಳಲ್ಲಿ ಬಚ್ಚಿಟ್ಟಿದ್ದ 1.62 ಕೋಟಿ ನಗದು ಹಣ ಪತ್ತೆಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ವಜ್ರದ ಆಭರಣಗಳೂ ಪತ್ತೆಯಾಗಿವೆ.

ಶೋಧದ ಸಮಯದಲ್ಲಿ, ವಿಜಿಲೆನ್ಸ್ ಒಂದು ಟೊಯೋಟಾ ಇನ್ನೋವಾ ಮತ್ತು ಹುಂಡೈ ಐ20 ಕಾರು, ಒಂದು ರಿವಾಲ್ವರ್ ಜೊತೆಗೆ 1 ಕೋಟಿಗೂ ಹೆಚ್ಚು ಹೂಡಿಕೆ ದಾಖಲೆಗಳನ್ನೂ ಪತ್ತೆಹಚ್ಚಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?