LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ALERT : ಕಾರಿಗೆ ಕಂಪನಿ ನೀಡಿದ ಸನ್’ಶೇಡ್, ನೆಟ್ ಗಳನ್ನು ಬಳಸುತ್ತಿದ್ದೀರಾ ಎಚ್ಚರ.! ₹5,000 ವರೆಗೆ ದಂಡ ಫಿಕ್ಸ್ !

ಸಾಮಾಜಿಕ ಜಾಲತಾಣಗಳಲ್ಲಿ ಕಾರು ಮಾಲೀಕರು ಮತ್ತು ಟ್ರಾಫಿಕ್ ಪೊಲೀಸರ ನಡುವೆ ಕಾರಿನ ಕಿಟಕಿ ಪರದೆಗಳು (Sunshades) ಹಾಗೂ ನೆಟ್‌ಗಳ ಬಳಕೆ ಕುರಿತು ಆಗಾಗ ವಾಗ್ವಾದಗಳು ನಡೆಯುತ್ತಿರುತ್ತವೆ. “ಈ ಸನ್‌ಶೇಡ್‌ಗಳನ್ನು ಕಾರು ಕಂಪನಿಯೇ ಇನ್‌ಬಿಲ್ಟ್ ಆಗಿ ನೀಡಿದೆ. ಹಾಗಿದ್ದರೆ ದಂಡ ಹೇಗೆ ಹಾಕಬಹುದು?” ಎಂದು ಹಲವರು ಪ್ರಶ್ನಿಸುತ್ತಾರೆ. ಆದರೆ ಟ್ರಾಫಿಕ್ ನಿಯಮಗಳ ಪ್ರಕಾರ ಕಾರಿನ ಗಾಜುಗಳಿಗೆ ದೃಶ್ಯತೆಯನ್ನು ಕಡಿಮೆ ಮಾಡುವ ಯಾವುದೇ ಸನ್‌ಶೇಡ್‌, ಕಪ್ಪು ಫಿಲ್ಮ್‌ ಅಥವಾ ನೆಟ್‌ಗಳನ್ನು ಬಳಸುವುದು ಕಾನೂನುಬಾಹಿರವಾಗಿದೆ.

ಕಾರು ಗಾಜುಗಳ ದೃಶ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್‌ ಕಠಿಣ ನಿಯಮ

2012ರಲ್ಲಿ ಸುಪ್ರೀಂ ಕೋರ್ಟ್ ಕಾರಿನ ಗಾಜುಗಳ ಪಾರದರ್ಶಕತೆ ಕುರಿತು ಮಹತ್ವದ ತೀರ್ಪು ನೀಡಿತ್ತು. ಭದ್ರತಾ ಕಾರಣಗಳಿಂದ ಕಾರಿನೊಳಗೆ ಯಾರು ಇದ್ದಾರೆ ಎಂಬುದು ಹೊರಗಿನಿಂದ ಸ್ಪಷ್ಟವಾಗಿ ಕಾಣಬೇಕು ಎಂದು ನ್ಯಾಯಾಲಯ ಹೇಳಿದೆ.

ನಿಯಮದ ಪ್ರಕಾರ:

  • ಮುಂಭಾಗದ ವಿಂಡ್‌ಶೀಲ್ಡ್ ಮತ್ತು ಹಿಂಭಾಗದ ಗಾಜುಗಳಿಂದ ಕನಿಷ್ಠ 70% ಬೆಳಕು ಒಳಗೆ ಬರಬೇಕು.
  • ಬದಿಯ ಗಾಜುಗಳಿಂದ ಕನಿಷ್ಠ 50% ಬೆಳಕು ಒಳಗೆ ಪ್ರವೇಶಿಸಬೇಕು.
  • ಈ ದೃಶ್ಯತೆಯನ್ನು ಕಡಿಮೆ ಮಾಡುವ ಕಪ್ಪು ಫಿಲ್ಮ್‌, ಜಾಲಿ, ನೆಟ್‌ ಅಥವಾ ಬಟ್ಟೆಯ ಸನ್‌ಶೇಡ್‌ಗಳನ್ನು ಬಳಸುವುದು ಕಾನೂನುಬಾಹಿರ.

ಕಂಪನಿಗಳು ಸನ್‌ಶೇಡ್‌ಗಳನ್ನು ಏಕೆ ನೀಡುತ್ತವೆ?

ಹಾಗಾದರೆ ಕಾರು ಕಂಪನಿಗಳು ಪ್ರೀಮಿಯಂ ಮಾದರಿಗಳಲ್ಲಿ ಸನ್‌ಶೇಡ್‌ಗಳನ್ನು ಏಕೆ ನೀಡುತ್ತವೆ ಎಂಬ ಪ್ರಶ್ನೆ ಮೂಡಬಹುದು. ಇದರ ಉದ್ದೇಶ ಕಾರು ಓಡಿಸುವಾಗ ಬಳಸುವುದಲ್ಲ.ಕಾರನ್ನು ಬಿಸಿಲಿನಲ್ಲಿ ಪಾರ್ಕ್ ಮಾಡಿದಾಗ ಒಳಗಿನ ಉಷ್ಣತೆಯನ್ನು ಕಡಿಮೆ ಮಾಡಲುಸೀಟುಗಳು ಮತ್ತು ಒಳಾಂಗಣ ಭಾಗಗಳನ್ನು ಬಿಸಿಲಿನಿಂದ ರಕ್ಷಿಸಲು ಪಾರ್ಕ್ ಮಾಡಿದ ವಾಹನದಲ್ಲಿ ಖಾಸಗಿತನ (Privacy) ಕಾಪಾಡಿಕೊಳ್ಳಲು ಎಂದು ನ್ಯಾಯಾಲಯ ಹೇಳಿದೆ.ಈ ಸನ್‌ಶೇಡ್‌ಗಳನ್ನು ಬಳಸಬಹುದು. ಆದರೆ ಚಲಿಸುತ್ತಿರುವ ವಾಹನದಲ್ಲಿ ಬಳಸಿದರೆ ದಂಡ ವಿಧಿಸಲಾಗುತ್ತದೆ.

ಕಾರು ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಬಹುದೇ?

ಕಂಪನಿ ನೀಡಿದ ಪರಿಕರಗಳಿಗೆ ದಂಡ ವಿಧಿಸುತ್ತಿದ್ದರೆ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಬಹುದೇ ಎಂಬ ಪ್ರಶ್ನೆ ಹಲವರಿಗೆ ಮೂಡುತ್ತದೆ. ಆದರೆ ಸಾಮಾನ್ಯವಾಗಿ ಇದರಿಂದ ಪ್ರಯೋಜನವಾಗುವುದಿಲ್ಲ. ಏಕೆಂದರೆ ವಾಹನ ಖರೀದಿಸುವ ವೇಳೆ ನೀಡುವ ನಿಯಮಗಳು ಮತ್ತು ಬಳಕೆದಾರರ ಕೈಪಿಡಿಯಲ್ಲಿ, ಚಲಿಸುತ್ತಿರುವ ವಾಹನದಲ್ಲಿ ಇಂತಹ ಸನ್‌ಶೇಡ್‌ಗಳ ಬಳಕೆಗೆ ಸಂಬಂಧಿಸಿದ ಜವಾಬ್ದಾರಿ ಕಂಪನಿಯದ್ದಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ.

ಈ ವರ್ಗದವರಿಗೆ ಮಾತ್ರ ವಿನಾಯಿತಿ

ಭಾರತದಲ್ಲಿ ಈ ನಿಯಮದಿಂದ ಕೇವಲ Z+ ಭದ್ರತೆ ಹೊಂದಿರುವ ವಿಐಪಿಗಳ ವಾಹನಗಳಿಗೆ ಮಾತ್ರ ವಿನಾಯಿತಿ ಇದೆ. ಅವರ ಭದ್ರತಾ ಕಾರಣಗಳಿಂದ ಕಪ್ಪು ಗಾಜುಗಳು ಅಥವಾ ಸನ್‌ಶೇಡ್‌ಗಳನ್ನು ಬಳಸಲು ಅನುಮತಿ ನೀಡಲಾಗಿದೆ.ಇವರನ್ನು ಹೊರತುಪಡಿಸಿ, ಯಾವುದೇ ಸಾಮಾನ್ಯ ನಾಗರಿಕರು ಚಲಿಸುತ್ತಿರುವ ಕಾರಿನಲ್ಲಿ ಸನ್‌ಶೇಡ್‌ ಅಥವಾ ದೃಶ್ಯತೆಯನ್ನು ಕಡಿಮೆ ಮಾಡುವ ಪರದೆಗಳನ್ನು ಬಳಸಿದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸಬಹುದು.

ದಂಡ ಎಷ್ಟು?

ರಾಜ್ಯದಿಂದ ರಾಜ್ಯಕ್ಕೆ ನಿಯಮಗಳು ಬದಲಾಗುತ್ತವೆ. ಸಾಮಾನ್ಯವಾಗಿ ಈ ಉಲ್ಲಂಘನೆಗೆ ₹500ರಿಂದ ₹5,000ವರೆಗೆ ದಂಡ ವಿಧಿಸಬಹುದು. ಕಾರು ಕಂಪನಿ ಸನ್‌ಶೇಡ್‌ಗಳನ್ನು ನೀಡಿದ್ದರೂ, ಅವುಗಳನ್ನು ವಾಹನ ಚಲಿಸುತ್ತಿರುವಾಗ ಬಳಸುವುದು ಕಾನೂನುಬಾಹಿರ. ಹೀಗಾಗಿ ಅನಗತ್ಯ ದಂಡ ತಪ್ಪಿಸಲು ಟ್ರಾಫಿಕ್ ನಿಯಮಗಳನ್ನು ಪಾಲಿಸುವುದು ಉತ್ತಮ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸೀಶೆಲ್ಸ್ ಪ್ರವಾಸದಲ್ಲಿ ವಿಶ್ವದ ಅತ್ಯಂತ ಹಿರಿಯ ಜೀವಿ 194 ವರ್ಷದ ಜೋನಾಥನ್ ಆಮೆ ವೀಕ್ಷಿಸಿದ ಪ್ರಧಾನಿ ಮೋದಿರಾಜ್ಯದ ಬಸ್ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ: ಸಿದ್ಧರಾಮಯ್ಯ5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಇಂದಿನಿಂದ ಜು.1 ರವರೆಗೆ ಪಲ್ಸ್ ಪೋಲಿಯೋ: 65 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿBREAKING: ರಾಜ್ಯದಲ್ಲಿ 13,675 ಅಕ್ರಮ ವಲಸಿಗರು ಪತ್ತೆ: ಜಿಲ್ಲಾವಾರು ಪಟ್ಟಿ ಸಿದ್ಧಪಡಿಸಿದ ಗೃಹ ಇಲಾಖೆ2027ರ ವಿಶ್ವಕಪ್‌ಗೆ ರೋಹಿತ್ ಶರ್ಮಾ ಆಯ್ಕೆ ಬೇಡ: ವಿವಾದ ಸೃಷ್ಟಿಸಲಿದೆಯೇ ಮಾಜಿ ಕ್ರಿಕೆಟಿಗನ ಹೇಳಿಕೆ?ಇಂದು ಬೆಂಗಳೂರು ಮೊಟ್ಟಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆBREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್