LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

AI ಕೈಚೆಲ್ಲಿದಾಗ ಮನುಷ್ಯರೇ ಆಸರೆಯಾದರು ! 350 ಅನುಭವಿ ಟೆಕ್ಕಿಗಳನ್ನು ಮರುನೇಮಿಸಿಕೊಂಡ ಫೋರ್ಡ್‌.!

ಜಗತ್ತಿನಾದ್ಯಂತ ಕೃತಕ ಬುದ್ಧಿಮತ್ತೆ (AI) ಬಳಕೆ ವೇಗವಾಗಿ ಹೆಚ್ಚುತ್ತಿರುವ ಸಂದರ್ಭದಲ್ಲಿ, ಪ್ರಮುಖ ವಾಹನ ತಯಾರಕ ಫೋರ್ಡ್‌( Ford Motor Company) ಕೂಡ ಇದೇ ದಾರಿಯಲ್ಲಿ ಸಾಗಿತ್ತು. ಆದರೆ ಅನುಭವಿ ಇಂಜಿನಿಯರ್‌ಗಳ ಪರಿಣತಿಗೆ ಎಐ ಸರಿಸಾಟಿಯಾಗದ ಕಾರಣ, ಸಂಸ್ಥೆ ಇದೀಗ ಅವರನ್ನು ಮತ್ತೆ ಕೆಲಸಕ್ಕೆ ಕರೆತರುತ್ತಿದೆ.

ಹೌದು. ಕೃತಕ ಬುದ್ಧಿಮತ್ತೆ (ಎಐ) ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದ ಅಮೆರಿಕದ ವಾಹನ ತಯಾರಕ ಫೋರ್ಡ್‌ಗೆ ಇದೀಗ ಮಾನವ ಪರಿಣತಿಯ ಮಹತ್ವ ಅರಿವಾಗಿದೆ. ಗುಣಮಟ್ಟ ಪರಿಶೀಲನೆಗಾಗಿ ಅಳವಡಿಸಿದ್ದ 900 ಎಐ ಕ್ಯಾಮೆರಾಗಳು ನಿರೀಕ್ಷಿತ ಫಲ ನೀಡದ ಹಿನ್ನೆಲೆಯಲ್ಲಿ, ಕಂಪನಿ ಸುಮಾರು 350 ಅನುಭವಿ ಇಂಜಿನಿಯರ್‌ಗಳನ್ನು ಮರುನೇಮಕ ಮಾಡಿಕೊಂಡಿದ್ದು, ಎಐಗೂ ಮಾನವ ಅನುಭವ ಮತ್ತು ಕೌಶಲ್ಯವೇ ನಿಜವಾದ ಬಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಬ್ಲೂಮ್‌ಬರ್ಗ್‌ ವರದಿ ಪ್ರಕಾರ, ಫೋರ್ಡ್‌ನ ಗುಣಮಟ್ಟ ಪರಿಶೀಲನಾ (Quality Assurance) ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಹಲವು ಅನುಭವಿ ಇಂಜಿನಿಯರ್‌ಗಳು ಕಳೆದ ಕೆಲವು ವರ್ಷಗಳಲ್ಲಿ ಸಂಸ್ಥೆಯನ್ನು ತೊರೆದಿದ್ದರು. ಅವರ ಸ್ಥಾನಕ್ಕೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡದೇ, ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಸ್ಥೆ 900 ಎಐ ಆಧಾರಿತ ಕ್ಯಾಮೆರಾಗಳನ್ನು ಅಳವಡಿಸಿತ್ತು.

ಆ ಸಂದರ್ಭದಲ್ಲಿ ಫೋರ್ಡ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ (COO) ಕುಮಾರ್ ಗಲ್ಹೋತ್ರಾ, “ಉದ್ಯಮ ಕ್ಷೇತ್ರದಾದ್ಯಂತ ಎಐ ವೇಗವಾಗಿ ವಿಸ್ತರಿಸುತ್ತಿದೆ” ಎಂದು ಹೇಳಿದ್ದರು. ಸಂಸ್ಥೆಯ ಸಿಇಒ Jim Farley ಕೂಡ “ಎಐ ಅನೇಕ ವೈಟ್‌-ಕಾಲರ್‌ ಉದ್ಯೋಗಗಳನ್ನು ಬದಲಾಯಿಸಬಹುದು” ಎಂದು ಅಭಿಪ್ರಾಯಪಟ್ಟಿದ್ದರು.

ಆದರೆ ಕೆಲವೇ ತಿಂಗಳಲ್ಲಿ ಆ ಅಂದಾಜುಗಳು ತಪ್ಪಾಗಿರುವುದು ಸ್ಪಷ್ಟವಾಯಿತು. ಎಐ ವ್ಯವಸ್ಥೆ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದ ಕಾರಣ, ಫೋರ್ಡ್‌ ಮತ್ತೆ ಅನುಭವಿ ಇಂಜಿನಿಯರ್‌ಗಳನ್ನು ನೇಮಕ ಮಾಡತೊಡಗಿದೆ. ಇದುವರೆಗೆ ಸುಮಾರು 350 ಇಂಜಿನಿಯರ್‌ಗಳನ್ನು ಮರುನೇಮಕ ಮಾಡಿಕೊಂಡಿರುವುದಾಗಿ ಕಂಪನಿ ತಿಳಿಸಿದೆ. ಮರುನೇಮಕಗೊಂಡ ಇಂಜಿನಿಯರ್‌ಗಳಿಗೆ ಎಐ ವ್ಯವಸ್ಥೆಗೆ ತರಬೇತಿ ನೀಡುವ ಜವಾಬ್ದಾರಿಯನ್ನು ವಹಿಸಲಾಗಿದೆ. ಫೋರ್ಡ್‌ನ ವಾಹನ ಹಾರ್ಡ್‌ವೇರ್‌ ಇಂಜಿನಿಯರಿಂಗ್ ವಿಭಾಗದ ಉಪಾಧ್ಯಕ್ಷ ಚಾರ್ಲ್ಸ್ ಪೂನ್‌ ಅವರು, “ಎಐ ಅತ್ಯುತ್ತಮ ಸಾಧನವೇ ಸರಿ. ಆದರೆ ಅದರ ಕಾರ್ಯಕ್ಷಮತೆ ಅದಕ್ಕೆ ನೀಡುವ ತರಬೇತಿ ಮತ್ತು ಮಾಹಿತಿಯ ಗುಣಮಟ್ಟದ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಲ್ಲಿ ಸಂಸ್ಥೆಯ ಅನುಭವಿ ಉದ್ಯೋಗಿಗಳಿಗೆ ನೀಡಬೇಕಾದಷ್ಟು ಮಹತ್ವ ನೀಡಲಾಗಿಲ್ಲ ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಅವರ ಸ್ಥಾನದಲ್ಲಿ ಅಳವಡಿಸಿದ್ದ ಎಐ ವ್ಯವಸ್ಥೆ ನಿರೀಕ್ಷಿಸಿದ ಮಟ್ಟದಲ್ಲಿ ಕಾರ್ಯನಿರ್ವಹಿಸಲಿಲ್ಲ ಎಂದೂ ತಿಳಿಸಿದ್ದಾರೆ.“ಕೇವಲ ಎಐಗೆ ನಮ್ಮ ವಿನ್ಯಾಸದ ಅಗತ್ಯಗಳನ್ನು ನೀಡಿದರೆ ಅದು ಸ್ವಯಂ ಅತ್ಯುತ್ತಮ ಗುಣಮಟ್ಟದ ಉತ್ಪನ್ನವನ್ನು ಸೃಷ್ಟಿಸುತ್ತದೆ ಎಂದು ನಾವು ತಪ್ಪಾಗಿ ಭಾವಿಸಿದ್ದೆವು,” ಎಂದು ಚಾರ್ಲ್ಸ್ ಪೂನ್‌ ಹೇಳಿದ್ದಾರೆ.

ಅನುಭವಿ ಇಂಜಿನಿಯರ್‌ಗಳಲ್ಲಿರುವ ತಾಂತ್ರಿಕ ಜ್ಞಾನ, ಅನುಭವ ಹಾಗೂ ನಿರ್ಧಾರ ಸಾಮರ್ಥ್ಯವನ್ನು ಎಐ ಇನ್ನೂ ಸಂಪೂರ್ಣವಾಗಿ ಹೊಂದಿಲ್ಲ. ಈ ಕಾರಣದಿಂದಲೇ ಎಐಗೆ ಹೆಚ್ಚಿನ ಗುಣಮಟ್ಟದ ತರಬೇತಿ ನೀಡಲು ಅನುಭವಿ ತಜ್ಞರ ನೆರವು ಅಗತ್ಯವಾಗಿದೆ ಎಂದು ಫೋರ್ಡ್ ಅಭಿಪ್ರಾಯಪಟ್ಟಿದೆ. ಇದೇ ಹಿನ್ನೆಲೆಯಲ್ಲಿ ಹಳೆಯ ಇಂಜಿನಿಯರ್‌ಗಳ ಜೊತೆಗೆ ಹೊಸ ಯುವ ಇಂಜಿನಿಯರ್‌ಗಳನ್ನೂ ಸಂಸ್ಥೆ ನೇಮಕ ಮಾಡಿಕೊಂಡಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!