ಬೆಂಗಳೂರು : ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ರೌಡಿಶೀಟರ್ ಅನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಪಿಣ್ಯ ಎಸಿಪಿ ಕಚೇರಿ ಕೂಗಳತೆ ದೂರದಲ್ಲಿಯೇ ದಡರಾತ್ರಿ ಈ ಒಂದು ಕೊಲೆ ನಡೆದಿದ್ದು ರೌಡಿಶೀಟರ್ ದೀಪಕ್ (31) ಈತನನ್ನು ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.
ಚಾಲಕನಾಗಿ ದೀಪಕ್ ಕೆಲಸ ಮಾಡಿಕೊಂಡಿದ್ದ ಬನ್ನೇರುಘಟ್ಟದ ದೀಪಕ್ ನಿನ್ನೆ ದಾಸರಹಳ್ಳಿಯಲ್ಲಿ ಸಾಮೂಹಿಕ ಗಣೇಶ ವಿಸರ್ಜನೆ ಇತ್ತು . ಈ ವೇಳೆ ಸ್ನೇಹಿತರ ಜೊತೆಗೆ ತೆರಳಿ ದೀಪಕ್ ವಾಪಸ್ ಆಗುತ್ತಿದ್ದ. ಇದೆ ಸಂದರ್ಭದಲ್ಲಿ ದುಷ್ಕರ್ಮಿಗಳು ಆತನ ಮೇಲೆ ಅಟ್ಯಾಕ್ ಮಾಡಿ ಕೊಲೆ ಮಾಡಿ ಪರಾರಿಯಾಗಿದ್ದಾರೆ, ಘಟನಾ ಸ್ಥಳಕ್ಕೆ ಪುಣ್ಯ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.