ದೇಶದ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳಿಗೆ ಉಚಿತ ವಿದ್ಯುತ್ ಸೌಲಭ್ಯ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ’ಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಮನೆ ಮೇಲ್ಚಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳುವವರಿಗೆ ಸರ್ಕಾರದಿಂದ ಭಾರೀ ಸಬ್ಸಿಡಿ ನೀಡಲಾಗುತ್ತದೆ. ಇದರಿಂದ ವಿದ್ಯುತ್ ಬಿಲ್ ಭಾರ ಕಡಿಮೆಯಾಗುವುದಲ್ಲದೆ, ಹಲವು ಮನೆಗಳಿಗೆ ಉಚಿತ ವಿದ್ಯುತ್ ಸೌಲಭ್ಯವೂ ದೊರೆಯಲಿದೆ.
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ ಎಂದರೇನು?
ಕೇಂದ್ರ ಸರ್ಕಾರವು 2024ರಲ್ಲಿ ಈ ಯೋಜನೆಯನ್ನು ಆರಂಭಿಸಿತು. ಬಡ ಹಾಗೂ ಹಿಂದುಳಿದ ವರ್ಗದ ಕುಟುಂಬಗಳು ತಮ್ಮ ಮನೆಗಳ ಮೇಲ್ಚಾವಣಿಯಲ್ಲಿ ರೂಫ್‌ಟಾಪ್ ಸೋಲಾರ್ ಪ್ಯಾನೆಲ್ ಅಳವಡಿಸಿಕೊಳ್ಳಲು ಆರ್ಥಿಕ ನೆರವು ನೀಡುವುದು ಇದರ ಉದ್ದೇಶವಾಗಿದೆ.
2026-27ರ ಆರ್ಥಿಕ ವರ್ಷದ ಅಂತ್ಯದೊಳಗೆ 1 ಕೋಟಿ ಮನೆಗಳಲ್ಲಿ ರೂಫ್‌ಟಾಪ್ ಸೋಲಾರ್ ವ್ಯವಸ್ಥೆ ಅಳವಡಿಸುವ ಗುರಿ ಸರ್ಕಾರ ಹೊಂದಿದೆ. ಯೋಜನೆಯಡಿ ಲಾಭಾರ್ಥಿಗಳು ಗರಿಷ್ಠ 300 ಯೂನಿಟ್‌ಗಳವರೆಗೆ ವಿದ್ಯುತ್ ಉತ್ಪಾದನೆಗೆ ಅರ್ಜಿ ಸಲ್ಲಿಸಬಹುದು. ಸಬ್ಸಿಡಿ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ.
ಸಬ್ಸಿಡಿ ಎಷ್ಟು ಸಿಗುತ್ತದೆ?
- 1 ಕಿಲೋವಾಟ್ ಸೋಲಾರ್ ವ್ಯವಸ್ಥೆ – ₹30,000 ಸಬ್ಸಿಡಿ
- 2 ಕಿಲೋವಾಟ್ ಸೋಲಾರ್ ವ್ಯವಸ್ಥೆ – ₹60,000 ಸಬ್ಸಿಡಿ
- 3 ಕಿಲೋವಾಟ್ ಸೋಲಾರ್ ವ್ಯವಸ್ಥೆ – ಗರಿಷ್ಠ ₹78,000 ಸಬ್ಸಿಡಿ
ಯಾರು ಅರ್ಹರು?
- ಅರ್ಜಿದಾರರು ಭಾರತೀಯ ನಾಗರಿಕರಾಗಿರಬೇಕು
- ಮಧ್ಯಮ ಅಥವಾ ಕೆಳಮಧ್ಯಮ ವರ್ಗದ ಕುಟುಂಬಕ್ಕೆ ಸೇರಿದವರಾಗಿರಬೇಕು
- ಸ್ವಂತ ಮನೆ ಹೊಂದಿರಬೇಕು ಹಾಗೂ ಸೋಲಾರ್ ಅಳವಡಿಸಲು ಸೂಕ್ತ ಮೇಲ್ಚಾವಣಿ ಇರಬೇಕು
- ಮಾನ್ಯವಾದ ವಿದ್ಯುತ್ ಸಂಪರ್ಕ ಕಡ್ಡಾಯ
- ಇದೇ ಉದ್ದೇಶಕ್ಕೆ ಬೇರೆ ಯಾವುದೇ ಸರ್ಕಾರಿ ಸಬ್ಸಿಡಿ ಪಡೆದಿರಬಾರದು
ಅರ್ಜಿ ಸಲ್ಲಿಸುವ ವಿಧಾನ
- pmsuryaghar.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
- Consumer ಆಯ್ಕೆಯನ್ನು ಕ್ಲಿಕ್ ಮಾಡಿ
- Apply Now ಮೇಲೆ ಕ್ಲಿಕ್ ಮಾಡಿ
- ಮೊಬೈಲ್ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ
- OTP ಮೂಲಕ ಲಾಗಿನ್ ಆಗಿ
- ಹೆಸರು, ಇಮೇಲ್, ವಿಳಾಸ, ರಾಜ್ಯ, ಜಿಲ್ಲೆ, ಪಿನ್‌ಕೋಡ್ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
- ಕೊನೆಯಲ್ಲಿ Save ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಸಲ್ಲಿಸಿ
ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಗೆ ಅಧಿಕೃತ ಪೋರ್ಟಲ್ pmsuryaghar.gov.in ಮೂಲಕ ಅರ್ಜಿ ಸಲ್ಲಿಸಬಹುದು.ಈ ಯೋಜನೆ 2024ರಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಆರಂಭಿಸಿತು.