LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇಂದ್ರದಿಂದ ಮಹಿಳೆಯರಿಗಾಗಿ ಅದ್ಭುತ ಯೋಜನೆ : ಪ್ರತಿ ತಿಂಗಳು ₹7000 ಆದಾಯ ಪಡೆಯುವ ಅವಕಾಶ !

ಮಹಿಳೆಯರಿಗೆ ಕೇಂದ್ರ ಸರ್ಕಾರವು ಉತ್ತಮ ಅವಕಾಶವೊಂದನ್ನು ಕಲ್ಪಿಸಿದೆ. ಭಾರತೀಯ ಜೀವ ವಿಮಾ ನಿಗಮ (LIC) ಮಹಿಳೆಯರಿಗಾಗಿ “ಬೀಮಾ ಸಖಿ ಯೋಜನೆ” ಎಂಬ ವಿಶೇಷ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಮಹಿಳೆಯರು ಎಲ್‌ಐಸಿ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸಿ ಪ್ರತಿ ತಿಂಗಳು ₹7,000 ವರೆಗೆ ಆದಾಯ ಗಳಿಸಬಹುದು.

ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಾದ LIC, ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಆಯ್ಕೆಯಾದ ಮಹಿಳೆಯರಿಗೆ ವಿಮಾ ಉತ್ಪನ್ನಗಳು, ವಿಮಾ ಸೇವೆಗಳು ಹಾಗೂ ಹಣಕಾಸು ಸಾಕ್ಷರತೆ ಕುರಿತು ತರಬೇತಿ ನೀಡಲಾಗುತ್ತದೆ. ತರಬೇತಿ ಪೂರ್ಣಗೊಂಡ ಬಳಿಕ ಅವರನ್ನು LIC ಏಜೆಂಟ್‌ಗಳಾಗಿ ನೇಮಿಸಲಾಗುತ್ತದೆ.

ತಿಂಗಳಿಗೆ ₹7 ಸಾವಿರ ಸ್ಟೈಪೆಂಡ್

ಯೋಜನೆಯಡಿ ಮೊದಲ ಮೂರು ವರ್ಷಗಳ ಕಾಲ ಸ್ಟೈಪೆಂಡ್ ನೀಡಲಾಗುತ್ತದೆ. ಮೊದಲ ವರ್ಷ ತಿಂಗಳಿಗೆ ₹7,000, ಎರಡನೇ ವರ್ಷ ₹6,000 ಹಾಗೂ ಮೂರನೇ ವರ್ಷ ₹5,000 ಸ್ಟೈಪೆಂಡ್ ದೊರೆಯಲಿದೆ. ಇದರ ಜೊತೆಗೆ ಅವರು ಮಾರಾಟ ಮಾಡುವ LIC ಪಾಲಿಸಿಗಳ ಮೇಲೆ ಕಮಿಷನ್‌ ಕೂಡ ಪಡೆಯಬಹುದು.

ಅರ್ಹತೆ ಏನು?

  • ವಯಸ್ಸು 18 ರಿಂದ 70 ವರ್ಷಗಳ ನಡುವೆ ಇರಬೇಕು.
  • ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿರಬೇಕು.
  • ಈಗಾಗಲೇ LIC ಏಜೆಂಟ್ ಆಗಿ ಕೆಲಸ ಮಾಡಿರಬಾರದು.
  • LIC ನೌಕರರು, ಏಜೆಂಟ್‌ಗಳ ಕುಟುಂಬ ಸದಸ್ಯರು ಹಾಗೂ ಆಪ್ತ ಸಂಬಂಧಿಕರು ಅರ್ಹರಲ್ಲ.
  • ಮೊದಲು IRDAI ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

ಮೂರು ವರ್ಷಗಳ ನಂತರ ಏನಾಗುತ್ತದೆ?

ಮೂರು ವರ್ಷಗಳ ನಂತರವೂ ಯೋಜನೆಯ ಸೌಲಭ್ಯ ಮುಂದುವರಿಯಬೇಕಾದರೆ LIC ನಿಗದಿಪಡಿಸಿದ ವ್ಯವಹಾರ ಮತ್ತು ಪಾಲಿಸಿ ಮಾರಾಟದ ಗುರಿಗಳನ್ನು ಸಾಧಿಸಬೇಕು. ಈ ಕೆಲಸವನ್ನು ಮನೆಯಲ್ಲೇ ಕುಳಿತು ಮಾಡಬಹುದಾಗಿದ್ದು, ಕಚೇರಿಗೆ ತೆರಳುವ ಅಗತ್ಯವಿಲ್ಲ.

ಅರ್ಜಿ ಸಲ್ಲಿಸುವ ವಿಧಾನ

ಆಸಕ್ತ ಮಹಿಳೆಯರು LIC ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅರ್ಜಿಯೊಂದಿಗೆ ಈ ದಾಖಲೆಗಳನ್ನು ಸಲ್ಲಿಸಬೇಕು:

  • ಆಧಾರ್ ಕಾರ್ಡ್
  • ವಿದ್ಯಾರ್ಹತಾ ಪ್ರಮಾಣಪತ್ರ
  • ವಿಳಾಸದ ದಾಖಲೆ
  • ಪಾಸ್‌ಪೋರ್ಟ್ ಗಾತ್ರದ ಫೋಟೋ
  • ಮೊಬೈಲ್ ಸಂಖ್ಯೆ
  • ಬ್ಯಾಂಕ್ ಖಾತೆ ವಿವರಗಳು

ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ ಅರ್ಹತೆಯನ್ನು ದೃಢಪಡಿಸಿದ ಬಳಿಕ ದೂರವಾಣಿ ಅಥವಾ ಇ-ಮೇಲ್ ಮೂಲಕ ಮಾಹಿತಿ ನೀಡುತ್ತಾರೆ. ನಂತರ ತರಬೇತಿ ನೀಡಿ LIC ಏಜೆಂಟ್ ಆಗಿ ಅವಕಾಶ ಕಲ್ಪಿಸಲಾಗುತ್ತದೆ.ಮನೆಯಲ್ಲೇ ಕುಳಿತು ಕೆಲಸ ಮಾಡಿ ಆದಾಯ ಗಳಿಸಲು ಬಯಸುವ ಮಹಿಳೆಯರಿಗೆ LIC ಬೀಮಾ ಸಖಿ ಯೋಜನೆ ಉತ್ತಮ ಅವಕಾಶವಾಗಿದೆ. ಸ್ಟೈಪೆಂಡ್ ಜೊತೆಗೆ ಪಾಲಿಸಿ ಮಾರಾಟದ ಕಮಿಷನ್‌ ಸಹ ದೊರೆಯುವುದರಿಂದ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಇದು ಸಹಕಾರಿಯಾಗಲಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!