LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅಬ್ಬಬ್ಬಾ ಅಜೇಯ 66 ರನ್, 3 ವಿಕೆಟ್: ಏನ್ ಗುರು ಕ್ರಿಕೆಟ್ ದೇವರು ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ಅಬ್ಬರ!

ನಿನ್ನೆ ( ಜೂನ್ 8 ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಟಿ ಟ್ವೆಂಟಿ ಮುಂಬೈ 2026 ಲೀಗ್ ಟೂರ್ನಿಯ ಲೀಗ್ ಹಂತದ 16ನೇ ಪಂದ್ಯದಲ್ಲಿ ಎಆರ್‌ಸಿಎಸ್ ಅಂಧೇರಿ ಹಾಗೂ ಬಾಂದ್ರಾ ಬ್ಲಾಸ್ಟರ್ಸ್ ತಂಡಗಳು ಮುಖಾಮಖಿಯಾಗಿದ್ದವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂದ್ರಾ ಬ್ಲಾಸ್ಟರ್ಸ್ ಆಲ್‌ರೌಂಡರ್‌ಗಳಾದ ಓಂ ಕೇಶ್‌ಕಾಮತ್ ಹಾಗೂ ಸಾಗರ್ ಛಬ್ರಿಯಾ ಆಟದ ಸಹಾಯದಿಂದ ಭಾರೀ ಮುಖಭಂಗದಿಂದ ಪಾರಾಗಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 144 ರನ್ ಕಲೆಹಾಕಿ ಎಆರ್‌ಸಿಎಸ್ ಅಂಧೇರಿ ತಂಡಕ್ಕೆ 145 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಎಆರ್‌ಸಿಎಸ್ ಅಂಧೇರಿ ಆರಂಭಿಕರ ಅಬ್ಬರದ ಆರಂಭ ಹಾಗೂ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಅರ್ಜುನ್ ತೆಂಡೂಲ್ಕರ್ ಆರ್ಭಟದ ನೆರವಿನಿಂದ 13.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ಗೆ 148 ರನ್ ಕಲೆಹಾಕಿ ಬರೋಬ್ಬರಿ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.

ಬಾಂದ್ರಾ ಬ್ಲಾಸ್ಟರ್ಸ್ ಕೇವಲ 27 ರನ್‌ಗೆ 5 ವಿಕೆಟ್ ಕಳೆದುಕೊಂಡು ಹೀನಾಯ ಆರಂಭ ಪಡೆದುಕೊಂಡಿತು. ಹೀಗೆ ಕಳಪೆ ಆರಂಭ ಪಡೆದುಕೊಂಡ ತಂಡಕ್ಕೆ ಓಂ ಕೇಶ್‌ಕಾಮತ್ 49 ರನ್ ಹಾಗೂ ಸಾಗರ್ ಛಬ್ರಿಯಾ ಅಜೇಯ 44 ರನ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿದರೆ ತಂಡದ ಮೂವರು ಆಟಗಾರರು ಡಕ್‌ಔಟ್ ಆದರು, ಐವರು ಕೇವಲ ಒಂದಂಕಿ ಗಳಿಸಿದರು.

ಎಆರ್‌ಸಿಎಸ್ ಅಂಧೇರಿ ಪರ ಅರ್ಜುನ್ ತೆಂಡೂಲ್ಕರ್ ಮೂರು ವಿಕೆಟ್, ಪ್ರಸೂನ್ ಸಿಂಗ್ ಎರಡು ವಿಕೆಟ್, ಶಿವಮ್ ದುಬೆ, ಅಜಯ್ ಬಿ ಮಿಶ್ರಾ, ಮುಶೀರ್ ಖಾನ್ ಹಾಗೂ ಪ್ರಗ್ನೇಶ್ ಕನ್ಪಿಲ್ಲೆವಾರ್ ತಲಾ ಒಂದೊಂದು ವಿಕೆಟ್ ಪಡೆದರು.

ಬಾಂದ್ರಾ ನೀಡಿದ ಗುರಿಯನ್ನು ಬೆನ್ನಟ್ಟಿದ ಎಆರ್‌ಸಿಎಸ್ ಅಂಧೇರಿ ಪರ ಆರಂಭಿಕರಾಗಿ ಕಣಕ್ಕಿಳಿದ ದಿವ್ಯಾನ್ಶ್ 11 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 26 ರನ್ ಬಾರಿಸಿದರೆ, ಮುಶೀರ್ ಖಾನ್ 38 ಎಸೆತಗಳಲ್ಲಿ ಅಜೇಯ 54 ರನ್ ಹಾಗೂ ಅರ್ಜುನ್ ತೆಂಡೂಲ್ಕರ್ 34 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 66 ರನ್ ಚಚ್ಚಿದರು.

ಹೀಗೆ ಆಲ್‌ರೌಂಡರ್ ಆಟವನ್ನಾಡಿ ಮೂರು ವಿಕೆಟ್ ಹಾಗೂ ಅಜೇಯ ಅರ್ಧಶತಕ ಬಾರಿಸಿ ಅಬ್ಬರಿಸಿದ ಅರ್ಜುನ್ ತೆಂಡೂಲ್ಕರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಕ್ರಿಕೆಟ್ ಪ್ರಿಯರು ಅರ್ಜುನ್ ತೆಂಡೂಲ್ಕರ್‌ ಆಟಕ್ಕೆ ಮಾರುಹೋದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!