ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ಹೆಚ್ಚುವರಿಯಾಗಿ 53 ತಾಲೂಕುಗಳನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಿ ಆದೇಶ ಹೊರಡಿಸಿದೆ. ಈ ಮೂಲಕ ಬರಪೀಡಿತ ತಾಲೂಕುಗಳ ಸಂಖ್ಯೆ 177ಕ್ಕೆ ಏರಿಕೆಯಾಗಿದೆ.
ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಕಾರ್ಯದರ್ಶಿ ಹಾಗೂ ಪರಿಹಾರ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಅವರು ಈ ಕುರಿತು ಅಧಿಕೃತ ಆದೇಶ (ಆದೇಶ ಸಂ: RD 586 TNR 2026 (PART 1)) ಹೊರಡಿಸಿದ್ದಾರೆ.
51 ತಾಲೂಕುಗಳಲ್ಲಿ ತೀವ್ರ ಬರ, 2 ತಾಲೂಕುಗಳಲ್ಲಿ ಸಾಧಾರಣ ಬರ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಸಲ್ಲಿಸಿದ ವೈಜ್ಞಾನಿಕ ವರದಿ ಹಾಗೂ 17 ಜಿಲ್ಲೆಗಳ 574 ಹಳ್ಳಿಗಳಲ್ಲಿ ನಡೆಸಲಾದ ಬೆಳೆ ಸಮೀಕ್ಷೆ (Ground Truthing) ಆಧಾರದ ಮೇಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಹೊಸದಾಗಿ ಘೋಷಿಸಲಾದ 53 ತಾಲೂಕುಗಳಲ್ಲಿ.
51 ತಾಲೂಕುಗಳು: ತೀವ್ರ ಬರಪೀಡಿತ (Severe)
2 ತಾಲೂಕುಗಳು: ಸಾಧಾರಣ ಬರಪೀಡಿತ (Moderate - ಬೆಂಗಳೂರು ದಕ್ಷಿಣ ಹಾಗೂ ಉಡುಪಿ ಜಿಲ್ಲೆಯ ಬ್ರಹ್ಮಾವರ)
ಈ ಘೋಷಣೆಯು ಆದೇಶ ಹೊರಡಿಸಿದ ದಿನಾಂಕದಿಂದ ಮುಂದಿನ ಆರು ತಿಂಗಳ ಕಾಲ ಜಾರಿಯಲ್ಲಿರುತ್ತದೆ.
ಬರಪೀಡಿತ ತಾಲೂಕುಗಳ ಪಟ್ಟಿ (ಜಿಲ್ಲಾವಾರು):
ಬೆಳಗಾವಿ: ಅಥಣಿ, ಬೈಲಹೊಂಗಲ, ಬೆಳಗಾವಿ, ಚಿಕ್ಕೋಡಿ, ಕಿತ್ತೂರು, ಮೂಡಲಗಿ, ನಿಪ್ಪಾಣಿ, ರಾಯಬಾಗ, ಯರಗಟ್ಟಿ.
ಹಾವೇರಿ: ಬ್ಯಾಡಗಿ, ಹಾನಗಲ್, ಹಾವೇರಿ, ರಾಣೆಬೆನ್ನೂರು, ಸವಣೂರು, ಶಿಗ್ಗಾಂವಿ.
ಯಾದಗಿರಿ: ಗುರುಮಿಠಕಲ್, ಹುಣಸಗಿ, ಶೋರಾಪುರ, ವಡಗೇರಾ, ಯಾದಗಿರಿ.
ಕಲಬುರಗಿ: ಚಿಂಚೋಳಿ, ಜೇವರ್ಗಿ, ಕಾಳಗಿ, ಕಮಲಾಪುರ, ಸೇಡಂ.
ಬಾಗಲಕೋಟೆ: ಬಾದಾಮಿ, ಹುನಗುಂದ, ಮುಧೋಳ, ರಬಕವಿ-ಬನಹಟ್ಟಿ, ತೇರದಾಳ.
ವಿಜಯಪುರ: ಆಲಮೇಲ, ದೇವರ ಹಿಪ್ಪರಗಿ, ಮುದ್ದೇಬಿಹಾಳ, ಸಿಂದಗಿ.
ಚಿತ್ರದುರ್ಗ: ಚಿತ್ರದುರ್ಗ, ಹೊಳಲ್ಕೆರೆ, ಮೊಳಕಾಲ್ಮೂರು.
ಗದಗ: ಲಕ್ಷ್ಮೇಶ್ವರ, ನರಗುಂದ, ಶಿರಹಟ್ಟಿ.
ಹಾಸನ: ಆಲೂರು, ಬೇಲೂರು.
ಕೊಪ್ಪಳ: ಕೊಪ್ಪಳ, ಯಲಬುರ್ಗಾ.
ವಿಜಯನಗರ: ಕೊಟ್ಟೂರು, ಕೂಡ್ಲಿಗಿ.
ಬಳ್ಳಾರಿ: ಸಿರುಗುಪ್ಪ.
ದಾವಣಗೆರೆ: ಹರಿಹರ.
ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ.
ಬೆಂಗಳೂರು ನಗರ: ಬೆಂಗಳೂರು ದಕ್ಷಿಣ (ಸಾಧಾರಣ ಬರ).
ಬೀದರ್: ಹುಲಸೂರ, ಕಮಲಾನಗರ.
ಉಡುಪಿ: ಬ್ರಹ್ಮಾವರ (ಸಾಧಾರಣ ಬರ).
ಪರಿಹಾರ ಕಾರ್ಯಗಳಿಗೆ ಸೂಚನೆ:
ಬರಪೀಡಿತ ತಾಲೂಕುಗಳಲ್ಲಿ SDRF ನಿಯಮಾವಳಿಗಳ ಅನ್ವಯ ಅಗತ್ಯವಿರುವ ಕುಡಿಯುವ ನೀರು, ಮೇವು ಸರಬರಾಜು ಹಾಗೂ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸರ್ಕಾರ ಅಧಿಕಾರ ನೀಡಿದೆ. ಜತೆಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಬೆಳೆ ಹಾನಿ ಜಂಟಿ ಸಮೀಕ್ಷೆ ನಡೆಸಿ ಶೀಘ್ರ ವರದಿ ಸಲ್ಲಿಸಲು ಆದೇಶಿಸಲಾಗಿದೆ.
(ಗಮನಿಸಿ: ಸರ್ಕಾರವು ಈ ಹಿಂದೆ ಹಂತ-ಹಂತವಾಗಿ 101 ಹಾಗೂ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿತ್ತು. ಇದೀಗ ಹೆಚ್ಚುವರಿಯಾಗಿ 53 ತಾಲೂಕುಗಳನ್ನು ಸೇರಿಸಲಾಗಿದೆ.)



