LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

5 ವರ್ಷ ಕಳೆಯುವ ಮುನ್ನವೇ ಅಧಿಕಾರ ಕಳೆದುಕೊಂಡ ಕರ್ನಾಟಕದ ಮುಖ್ಯಮಂತ್ರಿಗಳ ಪಟ್ಟಿ; ಕೇವಲ 7 ದಿನ ಹಾಗೂ 6 ದಿನ ಅಧಿಕಾರದಲ್ಲಿದ್ದ ಏಕೈಕ ಮುಖ್ಯಮಂತ್ರಿ ಇವರು!

ಮೇ 28ರ ಗುರುವಾರದಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಹೈಕಮಾಂಡ್ ಸೂಚನೆ ಮೇರೆಗೆ ಅಧಿಕಾರ ಹಂಚಿಕೆಗೆ ಸಮ್ಮತಿಸಿದ್ದಾರೆ. ಇನ್ನೂ ಎರಡು ವರ್ಷಗಳ ಅಧಿಕಾರ ಬಾಕಿ ಇರುವಾಗಲೇ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಉಳಿದ ಅವಧಿಗೆ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಲಿದ್ದಾರೆ.

ಹೀಗೆ 2013ರಿಂದ 2018ರವರೆಗೆ ಮುಖ್ಯಮಂತ್ರಿಯಾಗಿ ಸಂಪೂರ್ಣ ಅವಧಿ ಪೂರೈಸಿದ್ದ ಸಿದ್ದರಾಮಯ್ಯ ಈ ಬಾರಿ ಪೂರ್ಣ ಅವಧಿ ಅಧಿಕಾರದಲ್ಲಿರುವಲ್ಲಿ ವಿಫಲರಾಗಿದ್ದು, ಈ ರೀತಿ 2005ರಿಂದ ಇಲ್ಲಿಯವರೆಗೆ ಹಲವು ಮುಖ್ಯಮಂತ್ರಿಗಳು ವಿವಿಧ ಕಾರಣಕ್ಕೆ ಸಂಪೂರ್ಣ ಅವಧಿಗೆ ಮುಖ್ಯಮಂತ್ರಿಯಾಗಿರದೇ ರಾಜೀನಾಮೆ ನೀಡಿದ್ದಾರೆ.

ಹೀಗೆ ಐದು ವರ್ಷಕ್ಕೂ ಮುನ್ನ ರಾಜೀನಾಮೆ ನೀಡಿದ ರಾಜಕಾರಣಿಗಳ ಪಟ್ಟಿ ಮುಂದಿದೆ.

ಧರಂ ಸಿಂಗ್: ಕಾಂಗ್ರೆಸ್‌ನ ಧರಂ ಸಿಂಗ್ ಜೆಡಿಎಸ್ ಬೆಂಬಲದೊಂದಿಗೆ 2004ರ ಮೇ 28ರಲ್ಲಿ ಮುಖ್ಯಮಂತ್ರಿಯಾದರು. ಆದರೆ ಜೆಡಿಎಸ್ ಮೈತ್ರಿಯಿಂದ ಹಿಂದೆ ಸರಿದ ಕಾರಣ 2006ರ ಫೆಬ್ರವರಿ 3ರಂದು ರಾಜೀನಾಮೆ ನೀಡಿ ಅಧಿಕಾರ ಕಳೆದುಕೊಂಡರು. ಈ ಮೂಲಕ 1 ವರ್ಷ 251 ದಿನಗಳ ಕಾಲ ಮಾತ್ರ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದರು.

ಎಚ್‌ಡಿ ಕುಮಾರಸ್ವಾಮಿ: ಕಾಂಗ್ರೆಸ್‌ನಿಂದ ಮೈತ್ರಿ ಹಿಂಪಡೆದುಕೊಂಡ ಜೆಡಿಎಸ್ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದರು. ಆದರೆ ಫೆಬ್ರವರಿ 3, 2006ರಿಂದ 2007ರ ಅಕ್ಟೋಬರ್ 8ರವರೆಗೆ ಕೇವಲ 1 ವರ್ಷ 247 ದಿನಗಳಖ ಕಾಲ ಮಾತ್ರ ಕುಮಾರಸ್ವಾಮಿ ಸಿಎಂ ಆಗಿದ್ದರು. ಬಳಿಕ ಬಿಜೆಪಿ ಮೈತ್ರಿ ಮುರಿದುಕೊಂಡ ಕಾರಣ ಎಚ್‌ಡಿಕೆ ಅಧಿಕಾರ ಕಳೆದುಕೊಂಡರು.

ಈ ನಂತರ 35 ದಿನಗಳ ಕಾಲ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿತ್ತು.

ಬಿಎಸ್‌ವೈ: 2007ರ ನವೆಂಬರ್ 12ರಂದು ಮುಖ್ಯಮಂತ್ರಿಯಾದ ಯಡಿಯೂರಪ್ಪ ಬಹುಮತ ಸಾಬೀತುಪಡಿಸದ ಕಾರಣ 7 ದಿನಗಳ ಬಳಿಕ ನವೆಂಬರ್ 19ರಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು.

ಈ ದಿನದಂದ 2008ರ ಮೇ 29ರವರೆಗೆ 193 ದಿನಗಳವರೆಗೆ ರಾಷ್ಟ್ರಪತಿ ಆಡಳಿತ ರಾಜ್ಯದಲ್ಲಿತ್ತು.

ಬಿಎಸ್‌ವೈ: ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿಯಿತು. ಯಡಿಯೂರಪ್ಪ2008ರ ಮೇ 30ರಿಂದ 2011ರ ಆಗಸ್ಟ್ 5ರವರೆಗೆ 3 ವರ್ಷ 67 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಭ್ರಷ್ಟಾಚಾರದ ಆರೋಪದ ಕಾರಣ ಅಧಿಕಾರದಿಂದ ಕೆಳಗಿಳಿದರು.

ಸದಾನಂದ ಗೌಡ: 2011ರ ಆಗಸ್ಟ್ 5ರಿಂದ 2012ರ ಜುಲೈ 12ರವರೆಗೆ ಡಿವಿ ಸದಾನಂದಗೌಡ 342 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು. ಮುಂಬರುವ ಚುನಾವಣೆಯ ಕಾರಣ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿ ಬದಲಾವಣೆ ಮಾಡಿತು.

ಜಗದೀಶ್ ಶೆಟ್ಟರ್: 2012ರ ಜುಲೈ 12ರಿಂದ 2013ರ ಮೇ 13ರವರೆಗೆ 305 ದಿನಗಳ ಕಾಲ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದರು.

ಬಿಎಸ್‌ವೈ: ಪುನಃ 2018ರ ಮೇ 17ರಂದು ಮುಖ್ಯಮಂತ್ರಿಯಾದ ಬಿಎಸ್‌ ಯಡಿಯೂರಪ್ಪ ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾಗಿ 6 ದಿನಗಳ ಬಳಿಕ ಮೇ 23ರಂದು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿದರು.

ಎಚ್‌ಡಿಕೆ: ಬಿಎಸ್‌ವೈ ಬಹುಮತ ಸಾಬೀತುಪಡಿಸುವಲ್ಲಿ ವಿಫಲವಾದ ಬೆನ್ನಲ್ಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಎಚ್‌ಡಿ ಕುಮಾರಸ್ವಾಮಿ 2018ರ ಮೇ 23ರಂದು ಅಧಿಕಾರಕ್ಕೆ ಬಂದರು. ಆದರೆ 1 ವರ್ಷ 64 ದಿನಗಳ ಬಳಿಕ ಆಪರೇಷನ್ ಕಮಲದ ಪರಿಣಾಮ ಜೆಡಿಎಸ್ ಹಾಗೂ ಕಾಂಗ್ರೆಸ್‌ನ ಕೆಲ ಶಾಸಕರು ಬಿಜೆಪಿ ಸೇರಿದ ಕಾರಣ ಜೆಡಿಎಸ್ ಹಾಗೂ ಕಾಂಗ್ರೆಸ್ ಬಹುಮತ ಕಳೆದುಕೊಂಡು ಕುಮಾರಸ್ವಾಮಿ 2019ರ ಜುಲೈ 26ರಂದು ರಾಜೀನಾಮೆ ನೀಡಿದರು.

ಯಡಿಯೂರಪ್ಪ: ಬಳಿಕ 2019ರ ಜುಲೈ 26ರಿಂದ 2021ರ ಜುಲೈ 28ರವರೆಗೆ 2 ವರ್ಷ 2 ದಿನಗಳ ಕಾಲ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಹೈಕಮಾಂಡ್ ಸೂಚನೆ ಮೇರೆಗೆ ರಾಜೀನಾಮೆ ನೀಡಿದರು.

ಬಸವರಾಜ ಬೊಮ್ಮಾಯಿ: 2021ರ ಜುಲೈ 28ರಿಂದ 2023ರ ಮೇ 20ರವರೆಗೆ ಬಸವರಾಜ ಬೊಮ್ಮಾಯಿ 1 ವರ್ಷ 296 ದಿನಗಳ ಕಾಲ ಮುಖ್ಯಮಂತ್ರಿಯಾಗಿದ್ದರು.

ಸಿದ್ದರಾಮಯ್ಯ: 2023ರ ಮೇ 20ರಿಂದ 2026ರ ಜೂನ್ 3ರವರೆಗೆ 3 ವರ್ಷ 14 ದಿನಗಳ ಕಾಲ ಸಿಎಂ ಆಗಿದ್ದರು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿFIFA ವಿಶ್ವಕಪ್: ಕೊಲಂಬಿಯಾ ಪಂದ್ಯಕ್ಕೂ ಮುನ್ನ ವಿಶೇಷ ಚಿನ್ನದ ಬಣ್ಣದ ಬೂಟುಗಳಲ್ಲಿ ತರಬೇತಿ ಪಡೆದ ಕ್ರಿಸ್ಟಿಯಾನೊ ರೊನಾಲ್ಡೊ