LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಆರಂಭದಲ್ಲಿ 2 ಕೆಜಿ, ಈಗ ದಿನಕ್ಕೆ 400 ಕೆಜಿ ದಾಲ್ಚಾ ರೈಸ್ ಸೇಲ್: ನಾಗ್‌ಪುರದ ಈ ಹೋಟೆಲ್‌ನ ಸಕ್ಸೆಸ್ ಸ್ಟೋರಿ ವೈರಲ್!

ಮಹಾರಾಷ್ಟ್ರದ ನಾಗ್‌ಪುರ ಅಂದ ತಕ್ಷಣ ಕಣ್ಣುಮುಂದೆ ಬರುವುದು ಅಲ್ಲಿನ ಖಾರ-ಮಸಾಲೆಯುಕ್ತ ಆಹಾರ ಪದ್ಧತಿ. ಆದರೆ ಈಗ ಅಲ್ಲಿನ ಸರಳ ಹಾಗೂ ಗ್ರಾಮೀಣ ಶೈಲಿಯ ‘ದಾಲ್ಚಾ ರೈಸ್’ (Dalcha Rice) ಆಹಾರಪ್ರಿಯರ ಮನ ಗೆಲ್ಲುತ್ತಿದೆ. ಅದರಲ್ಲೂ ಗಣೇಶ್‌ಪೇಟ್‌ನಲ್ಲಿರುವ ‘ಜೈ ಶ್ರೀ ರಾಮ್ ದಾಲ್ಚಾ’ ಎಂಬ ಸಣ್ಣ ಹೋಟೆಲ್, ಕೇವಲ ಬೇಳೆ-ಅನ್ನದ ವ್ಯಾಪಾರದಿಂದಲೇ ದೇಶದ ಗಮನ ಸೆಳೆದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹೋಟೆಲ್‌ನ ವಿಡಿಯೋ ವೈರಲ್ ಆಗಿದ್ದು, ಇಲ್ಲಿ ದಿನಕ್ಕೆ ಉರಿಯುವ ಸೌದೆ ಒಲೆಯಲ್ಲಿ ಬರೋಬ್ಬರಿ 400 ಕೆಜಿ ದಾಲ್ಚಾ ರೈಸ್ ತಯಾರಿಸಲಾಗುತ್ತದೆ. ಯಾವುದೇ ಎಲ್‌ಪಿಜಿ ಸಿಲಿಂಡರ್ ಅಥವಾ ಮಾಡರ್ನ್ ಕಿಚನ್ ಇಲ್ಲದೆ, ಕೇವಲ ಸೌದೆ ಒಲೆಯ ಮೇಲೆಯೇ ದಿನಕ್ಕೆ ಸುಮಾರು 5,000 ಕ್ಕೂ ಹೆಚ್ಚು ಜನರಿಗೆ ದಾಲ್ಚಾ ರೈಸ್ ಉಣಬಡಿಸಲಾಗುತ್ತಿದೆ!

ಈ ಹೋಟೆಲ್‌ನ ಮಾಲೀಕ ಖುಷಾಲ್ ಧತುಂಡಾ ತಮ್ಮ ಯಶಸ್ಸಿನ ಕಥೆಯನ್ನು ಹಂಚಿಕೊಳ್ಳುತ್ತಾ, “ನಾವು ಆರಂಭದಲ್ಲಿ ದಿನಕ್ಕೆ ಕೇವಲ 2 ಕೆಜಿ ದಾಲ್ಚಾ ರೈಸ್‌ನಿಂದ ವ್ಯಾಪಾರ ಶುರು ಮಾಡಿದೆವು. ಆಗ ದಿನಕ್ಕೆ 1 ಅಥವಾ 1.5 ಕೆಜಿ ಮಾತ್ರ ಮಾರಾಟವಾಗಿ ಉಳಿದದ್ದು ವೇಸ್ಟ್ ಆಗುತ್ತಿತ್ತು. ಆದರೂ ನಾವು ಭರವಸೆ ಕಳೆದುಕೊಳ್ಳದೆ ಮುಂದುವರಿದೆವು. ಜನರ ಬಾಯಿಗೆ ರುಚಿ ಹಿಡಿಯುತ್ತಿದ್ದಂತೆ ವ್ಯಾಪಾರ ಹೆಚ್ಚಾಯಿತು. ಇಂದು ಎರಡು ವರ್ಷಗಳ ಅವಧಿಯಲ್ಲಿ ದಿನಕ್ಕೆ 400 ಕೆಜಿ ಮಾರಾಟ ಮಾಡುವ ಹಂತಕ್ಕೆ ಬೆಳೆದಿದ್ದೇವೆ. ನಮ್ಮಲ್ಲಿ ಬರುವ ಪ್ರತಿಯೊಬ್ಬ ಗ್ರಾಹಕರೂ ಇದೇ ದಾಲ್ಚಾ ರೈಸ್ ತಿನ್ನುತ್ತಾರೆ,” ಎಂದಿದ್ದಾರೆ.

ಇಲ್ಲಿ ಒಂದೇ ಬ್ಯಾಚ್‌ನಲ್ಲಿ 70 ಕೆಜಿ ಬಟಾಣಿ ಬೇಳೆಯನ್ನು (Vatana Dal) ಬೇಯಿಸಲಾಗುತ್ತದೆ. ಬೆಳಿಗ್ಗೆ 10 ಗಂಟೆಗೆ ಸಿದ್ಧವಾಗುವ 52 ಕೆಜಿ ಅಕ್ಕಿಯ ಮೊದಲ ಬ್ಯಾಚ್ ಕೆಲವೇ ಗಂಟೆಗಳಲ್ಲಿ ಖಾಲಿಯಾಗುತ್ತದೆ. ನಂತರ ಮತ್ತೊಂದು 72 ಕೆಜಿ ಅಕ್ಕಿಯ ಬ್ಯಾಚ್ ಸಿದ್ಧಪಡಿಸಲಾಗುತ್ತದೆ. ನಾಗ್‌ಪುರದ ಜಿಎಸ್‌ಟಿ ಮತ್ತು ಎಚ್‌ಬಿ ಟೌನ್ ಶಾಖೆಗಳಲ್ಲಿ ಸೇರಿ ಭರ್ಜರಿ ಮಾರಾಟ ಕಾಣುತ್ತಿರುವ ಈ ಸಂಸ್ಥೆ, ಶೀಘ್ರದಲ್ಲೇ ಚಂದ್ರಪುರ, ಭಂಡಾರಾ ಮತ್ತು ಗೊಂಡಿಯಾ ನಗರಗಳಿಗೂ ತನ್ನ ಶಾಖೆಗಳನ್ನು ವಿಸ್ತರಿಸಲು ಯೋಜನೆ ರೂಪಿಸಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸುಪ್ರೀಂ ಕೋರ್ಟ್‌ಗೂ ತಟ್ಟಿದ ಪ್ರತಿಭಟನೆಯ ಬಿಸಿ..! ಸಿಜೆಐ ಸೂರ್ಯಕಾಂತ್ ಮಹತ್ವದ ನಿರ್ಧಾರಕನ್ನಡ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ಸಮಿತಿಗೆ ಆರು ಜನ ಹೊಸ ಸದಸ್ಯರ ಸೇರ್ಪಡೆ: ಸರ್ಕಾರದಿಂದ ಆದೇಶ‘ರಾಷ್ಟ್ರಪತಿ ಪುರಾವೆ ಕೇಳಿದ್ದಾರೆ, ನಾವು ಕೊಡುತ್ತೇವೆ’; ನಿರಾಕರಣೆ ಬಂದಿದ್ದು PMO ಕಚೇರಿಯಿಂದ ಎಂದ ರಾಹುಲ್ ಗಾಂಧಿ!39 ವರ್ಷಗಳ ಬಳಿಕ ‘ಮಿಸ್ಟರ್ ಇಂಡಿಯಾ’ ಗೆಟಪ್‌ನಲ್ಲಿ ಕಂಗೊಳಿಸಿದ ಅನಿಲ್ ಕಪೂರ್: ಅಂದಿನ ಬಟ್ಟೆಗಳು ಇಂದಿಗೂ ಪರ್ಫೆಕ್ಟ್ ಫಿಟ್!ಚಿನ್ನದ ಬೆಲೆ ₹2.82 ಲಕ್ಷ ತಲುಪುತ್ತಾ? ಬಾಬಾ ವಂಗಾ ಭವಿಷ್ಯವಾಣಿ ಹಿಂದಿನ ಸತ್ಯವೇನು?ಸಿಇಸಿ ವಿರೋಧಿ ಪ್ರತಿಭಟನೆ ವರದಿ ಮಾಡುತ್ತಿದ್ದ 12ಕ್ಕೂ ಹೆಚ್ಚು ಪತ್ರಕರ್ತರ ಬಂಧನBREAKING : ಷೇರುಪೇಟೆಯಲ್ಲಿ ಸೆನ್ಸೆಕ್ಸ್ 900 ಕ್ಕೂ ಹೆಚ್ಚು ಅಂಕ ಕುಸಿತ , 22,400ರ ಕೆಳಗೆ ನಿಫ್ಟಿ, ಆತಂಕದಲ್ಲಿ ಹೂಡಿಕೆದಾರರು !ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ನಡೆ ನಿಗೂಢ: ಯಾವ ಕ್ಷೇತ್ರದಿಂದ ಕಣಕ್ಕೆ?ಆರಂಭದಲ್ಲಿ 2 ಕೆಜಿ, ಈಗ ದಿನಕ್ಕೆ 400 ಕೆಜಿ ದಾಲ್ಚಾ ರೈಸ್ ಸೇಲ್: ನಾಗ್‌ಪುರದ ಈ ಹೋಟೆಲ್‌ನ ಸಕ್ಸೆಸ್ ಸ್ಟೋರಿ ವೈರಲ್!ಗಣಿಗಾರಿಕೆ ವಿವಾದ ; ಮಾಜಿ ಬಿಜೆಪಿ ಶಾಸಕನನ್ನು ಹೊಡೆದು ಕೊಂದ ಗ್ರಾಮಸ್ಥರು ; ವಿಡಿಯೋ ವೈರಲ್ |WATCH VIDEO