LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸಿನಿಮಾ ರಂಗದ ಯೋಧನಿಗೆ ವಿದಾಯ ; 1999 ರ ಕಾರ್ಗಿಲ್ ಯುದ್ಧಭೂಮಿಯಲ್ಲಿ ಸೇವೆ ಸಲ್ಲಿಸಿದ್ದ ನಾನಾ !

ಭಾರತೀಯ ಚಿತ್ರರಂಗದ ದೈತ್ಯ ಅಭಿನೇತ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಹಿರಿಯ ನಟ ನಾನಾ ಪಾಟೇಕರ್ ಅವರು 75ನೇ ವಯಸ್ಸಿನಲ್ಲಿ ಗೋವಾದಲ್ಲಿ ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ತಮ್ಮ ವಿಶಿಷ್ಟ ಅಭಿನಯ ಶೈಲಿ ಹಾಗೂ ನೇರ ನುಡಿಯಿಂದ ಗಮನ ಸೆಳೆದಿದ್ದ ಅವರು, ದೇಶ ಮತ್ತು ಭಾರತೀಯ ಸೇನೆಯ ಬಗ್ಗೆ ಹೊಂದಿದ್ದ ಅಪಾರ ಗೌರವ ಹಾಗೂ ನಿಜವಾದ ದೇಶಪ್ರೇಮಕ್ಕೆ ಹೆಸರಾಗಿದ್ದರು. ಅವರ ಅಗಲಿಕೆಯ ಈ ದುಃಖದ ಸಂದರ್ಭದಲ್ಲಿ, 1999 ರ ಕಾರ್ಗಿಲ್ ಯುದ್ಧ ಸಮಯದಲ್ಲಿ ಅವರು ತೋರಿದ ಅಪರೂಪದ ಶೌರ್ಯದ ಕಥೆ ಮತ್ತೆ ಪ್ರತಿಯೊಬ್ಬರ ನೆನಪಿಗೆ ಬರುತ್ತಿದೆ.

ನಾನಾ ಪಾಟೇಕರ್ ಅವರ ಸೇನಾ ನಂಟು ಕೇವಲ ಸಿನಿಮಾಗಳು ಅಥವಾ ಸಾರ್ವಜನಿಕ ವೇದಿಕೆಗಳ ಹೇಳಿಕೆಗೆ ಸೀಮಿತವಾಗಿರಲಿಲ್ಲ. ತಮ್ಮ ನಟನಾ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗ, ಅಂದರೆ 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲಿ ಅವರು ನಿಯಂತ್ರಣ ರೇಖೆಯ ಸಮೀಪಕ್ಕೆ ತೆರಳಿ ಸೈನಿಕರೊಂದಿಗೆ ಸುಮಾರು 15 ದಿನಗಳಿಗೂ ಹೆಚ್ಚು ಕಾಲ ತಂಗಿದ್ದರು. ಆ ಯುದ್ಧಭೂಮಿಯ ಕಠಿಣ ವಾತಾವರಣ ಮತ್ತು ಕಷ್ಟಕರ ಪರಿಸ್ಥಿತಿಯಿಂದಾಗಿ ಅವರು ಶ್ರೀನಗರಕ್ಕೆ ತಲುಪಿದಾಗ 76 ಕೆಜಿ ತೂಕವಿದ್ದರು, ಆದರೆ ವಾಪಸ್ ಹಿಂತಿರುಗುವಾಗ ಅವರ ತೂಕ ಕೇವಲ 56 ಕೆಜಿಗೆ ಇಳಿದಿತ್ತು. ಅಲ್ಲಿ ಅವರು ಕ್ವಿಕ್ ರೆಸ್ಪಾನ್ಸ್ ಟೀಮ್ ಭಾಗವಾಗಿ ಕೆಲಸ ಮಾಡಿದ್ದಲ್ಲದೆ, ಸೇನಾ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ನೆರವಾಗಿದ್ದರು.

ಅವರ ಈ ನಿರ್ಧಾರ ದಿಢೀರನೆ ತೆಗೆದುಕೊಂಡದ್ದಲ್ಲ. 1990 ರ ದಶಕದ ಆರಂಭದಲ್ಲಿ ಪ್ರಹಾರ್ ಸಿನಿಮಾ ಮಾಡುವಾಗ ಅವರು ಮರಾಠಾ ಲೈಟ್ ಇನ್‌ಫಂಟ್ರಿ ಪಡೆಯೊಂದಿಗೆ ಸತತ 3 ವರ್ಷಗಳ ಕಾಲ ಇದ್ದು ಸೇನಾ ತರಬೇತಿ ಪಡೆದಿದ್ದರು. ಕಾರ್ಗಿಲ್ ಯುದ್ಧ ಶುರುವಾದಾಗ ತಮ್ಮ ತರಬೇತಿಯನ್ನು ದೇಶಕ್ಕೆ ಬಳಸಿಕೊಳ್ಳಲು ನಿರ್ಧರಿಸಿದ ಅವರು, ಹಿರಿಯ ಸೇನಾಧಿಕಾರಿಗಳಿಗೆ ಮನವಿ ಮಾಡಿದರು. ಆದರೆ ಆರಂಭದಲ್ಲಿ ಅಧಿಕಾರಿಗಳು ಅದಕ್ಕೆ ಒಪ್ಪಲಿಲ್ಲ. ಕೊನೆಗೆ ಅಂದಿನ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರಿಗೆ ಕರೆ ಮಾಡಿ ವಿಶೇಷ ಅನುಮತಿ ಪಡೆದು ಯುದ್ಧಭೂಮಿಗೆ ತೆರಳಿದರು.

ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ಅಷ್ಟೊಂದು ಪ್ರಸಿದ್ಧ ನಟರೊಬ್ಬರು ಸಿನಿಮಾ ಜೀವನ ಬದಿಗಿಟ್ಟು ಯುದ್ಧಭೂಮಿಯಲ್ಲಿ ಸೈನಿಕರೊಂದಿಗೆ ಕಾಲ ಕಳೆದಿದ್ದು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಸಾಹಸಮಯ ಅಧ್ಯಾಯ. ಟೆರಿಟೋರಿಯಲ್ ಆರ್ಮಿ ಜೊತೆಗೂ ನಿರಂತರ ನಂಟು ಹೊಂದಿದ್ದ ಅವರು, ನಿವೃತ್ತ ಸೈನಿಕರು ಹಾಗೂ ಯೋಧರ ಕುಟುಂಬಗಳ ಕಷ್ಟಕ್ಕೆ ಸದಾ ಸ್ಪಂದಿಸುತ್ತಿದ್ದರು. ಅಂತಹ ಒಬ್ಬ ನಿಜವಾದ ಕಲಾ ಯೋಧನನ್ನು ಕಳೆದುಕೊಂಡು ಭಾರತೀಯ ಚಿತ್ರರಂಗ ಹಾಗೂ ಅಭಿಮಾನಿ ಬಳಗ ಇಂದು ಕಣ್ಣೀರಿಡುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!