LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೀರೆಯುಟ್ಟು ಬರಿಗಾಲಿನಲ್ಲಿ 1600 ಮೀಟರ್ ಓಟ..! ಹೋಂಗಾರ್ಡ್ ಕೆಲಸಕ್ಕಾಗಿ ಮಹಿಳೆಯ ಛಲ, ವೀಡಿಯೋ ವೈರಲ್ |WATCH VIDEO

ನಮ್ಮಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ, ಕುಟುಂಬದವರ ಪ್ರೋತ್ಸಾಹವಿದ್ದರೂ ವಿವಿಧ ಕಾರಣಗಳನ್ನು ಹೇಳುತ್ತಾ ತಮ್ಮ ಗುರಿ ಸಾಧಿಸಲು ಹಿಂದೆ ಸರಿಯುತ್ತಾರೆ. ಆದರೆ ಕೆಲವರು ಇದಕ್ಕೆ ಸಂಪೂರ್ಣ ಭಿನ್ನವಾಗಿರುತ್ತಾರೆ. ಯಾವುದೇ ಸವಾಲು ಎದುರಾದರೂ ತಮ್ಮ ಗುರಿ ಸಾಧಿಸುವವರೆಗೆ ಹಠ ಬಿಡುವುದಿಲ್ಲ.

ಸರ್ಕಾರಿ ಉದ್ಯೋಗ ಪಡೆಯಬೇಕೆಂಬ ಛಲವಿದ್ದರೆ ಯಾವುದೇ ಸವಾಲು ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಜಾರ್ಖಂಡ್‌ನ ಕವಿತಾ ಕುಮಾರಿ ಉದಾಹರಣೆಯಾಗಿದ್ದಾರೆ. ಹೋಂಗಾರ್ಡ್ ನೇಮಕಾತಿಯ ದೈಹಿಕ ಪರೀಕ್ಷೆಯಲ್ಲಿ ಸೀರೆಯುಟ್ಟು, ಬರಿಗಾಲಿನಲ್ಲಿ 1600 ಮೀಟರ್ ಓಡಿದ ಅವರು ಕೇವಲ 6 ನಿಮಿಷಗಳಲ್ಲಿ ಓಟ ಪೂರ್ಣಗೊಳಿಸಿದ್ದಾರೆ. ಶೂ, ಟ್ರ್ಯಾಕ್‌ಸೂಟ್‌ ಸೇರಿದಂತೆ ಯಾವುದೇ ಕ್ರೀಡಾ ಸೌಲಭ್ಯವಿಲ್ಲದಿದ್ದರೂ ಕವಿತಾ ತೋರಿದ ಅದಮ್ಯ ಆತ್ಮವಿಶ್ವಾಸ ಮತ್ತು ಪರಿಶ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಇಂತಹ ಮಹಿಳೆಯೊಬ್ಬರ ಸಾಹಸ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಜಾರ್ಖಂಡ್‌ನ ರಾಮಗಢ್‌ನಲ್ಲಿ ಸರ್ಕಾರಿ ಉದ್ಯೋಗ ಪಡೆಯುವ ಉದ್ದೇಶದಿಂದ ಮಹಿಳೆಯೊಬ್ಬರು ಚೀರೆಯುಟ್ಟು, ಬರಿಗಾಲಿನಲ್ಲಿ 1600 ಮೀಟರ್ ಓಡಿ ಗಮನ ಸೆಳೆದಿದ್ದಾರೆ.

ಜಾರ್ಖಂಡ್ ಸರ್ಕಾರ ಇತ್ತೀಚೆಗೆ ಹೋಂಗಾರ್ಡ್ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಿತ್ತು. ಈ ಹುದ್ದೆಗಳಿಗೆ ಹಲವರು ಅರ್ಜಿ ಸಲ್ಲಿಸಿದ್ದರು. ರಾಮಗಢ್‌ನ ಕವಿತಾ ಕುಮಾರಿ ಕೂಡ ಹೋಂಗಾರ್ಡ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ನೇಮಕಾತಿಯ ಭಾಗವಾಗಿ ನಡೆದ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲೂ ಅವರು ಭಾಗವಹಿಸಿದ್ದರು.

ಈ ವೇಳೆ ಕವಿತಾ ಕುಮಾರಿ 1600 ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡರು. ವಿಶೇಷವೆಂದರೆ, ಅವರು ಯಾವುದೇ ಕ್ರೀಡಾ ಉಡುಪು ಅಥವಾ ರನ್ನಿಂಗ್ ಶೂ ಧರಿಸಿರಲಿಲ್ಲ. ಚೀರೆಯುಟ್ಟೇ, ಬರಿಗಾಲಿನಲ್ಲಿ ಇತರ ಅಭ್ಯರ್ಥಿಗಳೊಂದಿಗೆ ಸ್ಪರ್ಧಿಸಿ ನಿಗದಿತ ಸಮಯಕ್ಕಿಂತಲೂ ಮುಂಚಿತವಾಗಿ ಓಟವನ್ನು ಪೂರ್ಣಗೊಳಿಸಿದರು.

1600 ಮೀಟರ್ ಓಟವನ್ನು 10 ನಿಮಿಷಗಳಲ್ಲಿ ಪೂರ್ಣಗೊಳಿಸುವ ಗುರಿ ನೀಡಲಾಗಿತ್ತು. ಆದರೆ ಕವಿತಾ ಕುಮಾರಿ ಕೇವಲ 6 ನಿಮಿಷಗಳಲ್ಲೇ ಓಟವನ್ನು ಪೂರ್ಣಗೊಳಿಸಿ ಎಲ್ಲರನ್ನೂ ಅಚ್ಚರಿಗೊಳಿಸಿದರು. ಬಿಸಿಲಿನ ನಡುವೆಯೂ ಸೀರೆಯ ಸೆರಗನ್ನು ಸೊಂಟಕ್ಕೆ ಬಿಗಿಯಾಗಿ ಕಟ್ಟಿಕೊಂಡು ಅವರು ಓಡಿದ ದೃಶ್ಯಗಳ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ತೀವ್ರ ಬಡತನದ ನಡುವೆಯೂ ಸರ್ಕಾರಿ ಉದ್ಯೋಗ ಪಡೆದು ತಮ್ಮ ಕುಟುಂಬಕ್ಕೆ ಆಧಾರವಾಗಬೇಕು ಎಂಬ ಕವಿತಾ ಕುಮಾರಿಯ ಸಂಕಲ್ಪಕ್ಕೆ ದೇಶಾದ್ಯಂತ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅವರ ಪರಿಶ್ರಮ ಮತ್ತು ಛಲಕ್ಕೆ ಹಲವರು ‘ಸಲ್ಯೂಟ್’ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಈ ಘಟನೆ ತಿಳಿದು ಸ್ಥಳೀಯ ಡಿಫೆನ್ಸ್ ಅಕಾಡೆಮಿಯ ಸದಸ್ಯರು ಕವಿತಾ ಕುಮಾರಿಯ ಮನೆಗೆ ತೆರಳಿ, ಶಾಲು ಹೊದಿಸಿ ಸನ್ಮಾನಿಸಿದ್ದಾರೆ.

ಕವಿತಾ ಕುಮಾರಿಯ ಈ ಸಾಧನೆ ಕೇವಲ ಒಂದು ಓಟದ ಗೆಲುವಲ್ಲ, ಕನಸು ನನಸಾಗಿಸಿಕೊಳ್ಳಲು ಸೌಲಭ್ಯಗಳಿಗಿಂತ ಛಲ ಮತ್ತು ಪರಿಶ್ರಮವೇ ಮುಖ್ಯ ಎಂಬುದನ್ನು ತೋರಿಸಿದೆ. ಸರ್ಕಾರಿ ಉದ್ಯೋಗ ಪಡೆಯುವ ಅವರ ಹೋರಾಟಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅವರ ಆತ್ಮವಿಶ್ವಾಸ ಅನೇಕರಿಗೆ ಸ್ಫೂರ್ತಿಯಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?