LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಕೇವಲ 15 ವರ್ಷಕ್ಕೆ ‘ಟೀಮ್ ಇಂಡಿಯಾ’ ಜೆರ್ಸಿ ಪಡೆದ ವೈಭವ್ ಸೂರ್ಯವಂಶಿ ; ವೀಡಿಯೋ ವೈರಲ್ |WATCH VIDEO

ಭಾರತೀಯ ಕ್ರಿಕೆಟ್‌ನ ಟೀನೇಜ್ ಸೆನ್ಸೇಷನ್ ವೈಭವ್ ಸೂರ್ಯವಂಶಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಸಿದ್ಧನಾಗಿದ್ದಾನೆ. ಶುಕ್ರವಾರ ಐರ್ಲೆಂಡ್ ವಿರುದ್ಧ ಆರಂಭವಾಗುವ ಎರಡು ಟಿ20 ಪಂದ್ಯಗಳ ಸರಣಿಯೊಂದಿಗೆ ವೈಭವ್ ಸೂರ್ಯವಂಶಿ ಯುಗ ಆರಂಭವಾಗಲಿದೆ.ಐರ್ಲೆಂಡ್ ಪ್ರವಾಸಕ್ಕೆ ಸಿದ್ಧವಾಗಿರುವ ವೈಭವ್ ಸೂರ್ಯವಂಶಿಗೆ ಬಿಸಿಸಿಐ ತಂಡದ ಜೆರ್ಸಿಯನ್ನು ನೀಡಿದೆ. ಇದರ ವಿಡಿಯೋವನ್ನು ಎಕ್ಸ್‌ನಲ್ಲಿ ಹಂಚಲಾಗಿದೆ.

ರಘು ಕಾಲಿಗೆ ಬಿದ್ದು ಆಶೀರ್ವಾದ ಪಡೆದ ವೈಭವ್

ಟೀಮ್ ಇಂಡಿಯಾ ಜೆರ್ಸಿಯನ್ನು ಸ್ವೀಕರಿಸಿದ ವೈಭವ್ ಸೂರ್ಯವಂಶಿ ಭಾವೋದ್ವೇಗಗೊಂಡಿದ್ದಾನೆ. ಟೀಮ್ ಇಂಡಿಯಾ ಕಿಟ್ ಅನ್ನು ಟ್ರೋಡೌನ್ ಸ್ಪೆಷಲಿಸ್ಟ್ ರಘು ಸ್ವತಃ ಸೂರ್ಯವಂಶಿಗೆ ನೀಡಿದರು. ತಂಡದ ಹೋಟೆಲ್‌ನಲ್ಲಿ ವೈಭವ್‌ನ ರೂಮಿಗೆ ತೆರಳಿ ಕಿಟ್ ಹಸ್ತಾಂತರಿಸಿದರು.ರಘು ಬಂದ ಕ್ಷಣದಲ್ಲಿ ವೈಭವ್ ಬಾಗಿಲು ತೆರೆಯುತ್ತಿದ್ದಂತೆ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದನು. ನಂತರ ತನ್ನ ಭಾವನೆಗಳನ್ನು ಬಿಸಿಸಿಐ ಜೊತೆ ಹಂಚಿಕೊಂಡನು.

“ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ”

“ಈ ಅನುಭವವನ್ನು ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ. ನಾನು ಮೊದಲ ದಿನ ಬ್ಯಾಟ್ ಹಿಡಿದು ಅಭ್ಯಾಸಕ್ಕೆ ಮೈದಾನಕ್ಕೆ ಹೋದಾಗ ಕಂಡ ಕನಸು ಇಂದು ನನಸಾಗಿದೆ. ಇದು ನನ್ನ ಕ್ರಿಕೆಟ್ ಜೀವನದ ಅತಿ ದೊಡ್ಡ ಹೆಜ್ಜೆ. ಇದು ನಿಜವಾಗಿಯೂ ಕನಸಿನಂತೆ ಅನಿಸುತ್ತಿದೆ.

ಆ ಜೆರ್ಸಿಯನ್ನು ನೋಡುತ್ತಿದ್ದಂತೆ ನನ್ನ ಮುಖದಲ್ಲಿ ನಗು ತಡೆಯಲು ಸಾಧ್ಯವಾಗಲಿಲ್ಲ. ಕೆಲವೊಮ್ಮೆ ನಾವು ಊಹಿಸದ ವಿಷಯಗಳು ಸಂಭವಿಸುತ್ತವೆ. ಆದರೆ ಅವು ನಿಜವಾಗುವಾಗ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ತಿಳಿಯುವುದಿಲ್ಲ. ಈಗ ನನ್ನ ಪರಿಸ್ಥಿತಿಯೂ ಅದೇ ರೀತಿ ಇದೆ,” ಎಂದು ವೈಭವ್ ಹೇಳಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಜೆರ್ಸಿ ನಂಬರ್ 3

ವೈಭವ್ ಸೂರ್ಯವಂಶಿ ಜೆರ್ಸಿ ನಂಬರ್ 3 ಆಯ್ಕೆ ಮಾಡಿಕೊಂಡಿದ್ದಾನೆ. ಕೇವಲ 15ನೇ ವಯಸ್ಸಿನಲ್ಲಿ ಭಾರತ ತಂಡಕ್ಕೆ ಆಯ್ಕೆಯಾದ ಅತಿ ಕಿರಿಯ ಆಟಗಾರನಾಗಿ ಸಚಿನ್ ದಾಖಲೆ ಮುರಿದಿರುವ ವೈಭವ್, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರೆ ಮತ್ತೊಂದು ದಾಖಲೆ ಬರೆಯಲಿದ್ದಾನೆ.

13ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ಗೆ ಪ್ರವೇಶಿಸಿದ ವೈಭವ್, 14ನೇ ವಯಸ್ಸಲ್ಲೇ ದೇಶೀಯ ಕ್ರಿಕೆಟ್ ಮತ್ತು ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾನೆ. ಪ್ರತಿಯೊಂದು ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದ್ದಾನೆ. ಐಪಿಎಲ್‌ನಲ್ಲಿ ವಿಶ್ವದರ್ಜೆಯ ಬೌಲರ್‌ಗಳನ್ನು ಎದುರಿಸಿ ಭರ್ಜರಿ ಬ್ಯಾಟಿಂಗ್ ಮಾಡಿ ಎರಡು ಶತಕಗಳನ್ನು ಬಾರಿಸಿದ್ದಾನೆ. ಇತ್ತೀಚಿನ ಸೀಸನ್‌ನಲ್ಲಿ 776 ರನ್ ಗಳಿಸಿ ಟಾಪ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಪಡೆದಿದ್ದಾನೆ.

ಶ್ರೀಲಂಕಾದಲ್ಲಿ ಸ್ಫೋಟಕ ಪ್ರದರ್ಶನ

ಶ್ರೀಲಂಕಾದಲ್ಲಿ ನಡೆದ ತ್ರಿಕೋನ ಏಕದಿನ ಸರಣಿಯಲ್ಲಿ ಭಾರತ ‘ಎ’ ತಂಡದ ಪರವಾಗಿ ನಿರಂತರ ಮೂರು ಪಂದ್ಯಗಳಲ್ಲಿ ವಿಫಲವಾದರೂ, ನಾಲ್ಕನೇ ಪಂದ್ಯದಲ್ಲಿ ಆಕಾಶವೇ ಮಿತಿಯೆಂಬಂತೆ ಆಡಿದ ವೈಭವ್ ವಿಮರ್ಶಕರ ಬಾಯಿಗೆ ಬೀಗ ಹಾಕಿದನು. ಕೇವಲ 11 ಬಾಲ್‌ಗಳಲ್ಲಿ ಅರ್ಧಶತಕ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 29 ಬಾಲ್‌ಗಳಲ್ಲಿ 94 ರನ್ ಗಳಿಸಿ ಔಟಾಗಿದ್ದಾನೆ. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತನ್ನ ಸಾಮರ್ಥ್ಯ ತೋರಿಸಲು ಸಿದ್ಧನಾಗಿದ್ದಾನೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!