LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಫಿಟ್ನೆಸ್ ಚಾಲೆಂಜ್‌ಗೆ ಅಡಿಕ್ಟ್ ಆದ ಬಾಲಿವುಡ್ ನಟಿ: 118 ದಿನಗಳ ಕಠಿಣ ಸವಾಲು ಸ್ವೀಕರಿಸಿದ ಅಲಯಾ ಎಫ್!

ಬಾಲಿವುಡ್‌ನ ಫಿಟ್ನೆಸ್ ಪ್ರಿಯ ನಟಿ ಅಲಯಾ ಎಫ್ ತಮ್ಮ ಕಾಯಾಕಲ್ಪ ಹಾಗೂ ಫಿಟ್ನೆಸ್ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಈ ಹಿಂದೆ ಹಲವಾರು ಬಾರಿ ’75 ಹಾರ್ಡ್ ಫಿಟ್ನೆಸ್ ಚಾಲೆಂಜ್’ ಯಶಸ್ವಿಯಾಗಿ ಪೂರ್ಣಗೊಳಿಸಿದ್ದ ಅವರು, ಇದೀಗ ಅದನ್ನು ‘118 ದಿನಗಳ ಕಠಿಣ ಸವಾಲು’ ಆಗಿ ಪರಿವರ್ತಿಸಿಕೊಂಡು ನಿಯಮಿತವಾಗಿ ಅಭ್ಯಾಸ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ’75 ಹಾರ್ಡ್ ಚಾಲೆಂಜ್’ ಎಂಬುದು ಮಾನಸಿಕ ಶಕ್ತಿ ಮತ್ತು ಶಿಸ್ತನ್ನು ಹೆಚ್ಚಿಸುವ 75 ದಿನಗಳ ಕಠಿಣ ಯೋಜನೆಯಾಗಿದೆ. ಇದರಲ್ಲಿ ಯಾವುದೇ ದಿನ ಅಥವಾ ಕೆಲಸವನ್ನು ತಪ್ಪಿಸದೇ ನಿರಂತರವಾಗಿ ಕೈಗೊಳ್ಳಬೇಕಾಗುತ್ತದೆ. ಆದರೆ ಈ ಬಾರಿ ಅದನ್ನು 118 ದಿನಗಳಿಗೆ ವಿಸ್ತರಿಸಿರುವ ಬಗ್ಗೆ ಮಾತನಾಡಿರುವ ನಟಿ, “ಮೊದಲ ಬಾರಿ ಈ ಸವಾಲು ಸ್ವೀಕರಿಸಿದಾಗ ನನ್ನ ಜೀವನ ಸಂಪೂರ್ಣ ಬದಲಾಯಿತು. ಆ ನಂತರ ನನಗೆ ಇದು ಅಭ್ಯಾಸವಾಗಿ ಮಾರ್ಪಟ್ಟಿತು. ಈ ಫಿಟ್ನೆಸ್ ಪ್ರಯಾಣ ನನ್ನಲ್ಲಿ ಇನ್ನೇನು ಬದಲಾವಣೆ ತರಬಹುದು ಎಂಬ ಕುತೂಹಲದಿಂದ ನಾನು ಇದನ್ನು ಮುಂದುವರಿಸುತ್ತಿದ್ದೇನೆ” ಎಂದಿದ್ದಾರೆ.

ಹಬ್ಬಗಳು, ಮದುವೆ ಸಮಾರಂಭಗಳು ಹಾಗೂ ತಮ್ಮ ಜನ್ಮದಿನದಂತಹ ಆಚರಣೆಗಳ ನಡುವೆಯೂ ಈ ಕಠಿಣ ನಿಯಮವನ್ನು ಪಾಲಿಸುತ್ತಿರುವ ಅವರು, “ಹೆಚ್ಚು ಪ್ರಲೋಭನೆಗಳು ಇರುವ ಸಮಯದಲ್ಲೇ ಇಂತಹ ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳುವುದು ಮುಖ್ಯ. ಇದರಿಂದ ಮಾನಸಿಕವಾಗಿ ಹೆಚ್ಚು ದೃಢವಾಗಲು ಸಾಧ್ಯವಾಗುತ್ತದೆ. ಈ ಅಭ್ಯಾಸದಿಂದ ನನಗೆ ಮಾನಸಿಕ ಸ್ಪಷ್ಟತೆ ಸಿಕ್ಕಿದ್ದು, ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನೆರವಾಗಿದೆ” ಎಂದು ಹೇಳಿದ್ದಾರೆ.

ಇನ್ನು ನಟಿ ಅಲಯಾ ಅಭಿನಯಿಸಿದ್ದ ‘ಶ್ರೀಕಾಂತ್’ ಚಿತ್ರಕ್ಕೆ ಇತ್ತೀಚೆಗೆ ಅತ್ಯುತ್ತಮ ಹಿಂದಿ ಚಿತ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಲಭಿಸಿದೆ. ಈ ಕುರಿತು ಸಂತಸ ಹಂಚಿಕೊಂಡಿರುವ ಅವರು, ತಮ್ಮ ನಟನೆಯ ಚಿತ್ರಕ್ಕೆ ಇಂತಹ ಗೌರವ ಸಿಕ್ಕಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳಿಂದ ತೆರೆಮೇಲೆ ಕಾಣಿಸಿಕೊಳ್ಳದಿದ್ದರೂ, ಪ್ರಸ್ತುತ ಹಲವಾರು ಸಿನಿಮಾಗಳ ಕೆಲಸಗಳಲ್ಲಿ ಬ್ಯುಸಿಯಾಗಿದ್ದು ಶೀಘ್ರದಲ್ಲೇ ಅಧಿಕೃತವಾಗಿ ಹೊರಬರಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!