LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

10-10-2026 ಶನಿವಾರ ಮಹಾಲಯ ಅಮಾವಾಸ್ಯೆ

ಪ್ರಪಂಚದಲ್ಲಿ ಹುಟ್ಟುವ ಪ್ರತಿಯೊಂದು ಜೀವಿಯೂ ಹುಟ್ಟುವಾಗಲೇ ಐದು ಋಣವುಳ್ಳವನಾಗುತ್ತಾನೆ. ದೇವಋಣ, ಋಷಿಋಣ, ಪಿತೃಋಣ, ಮನುಷ್ಯಋಣ ಮತ್ತು ಭೂತಋಣ. 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ದೇವತೆಗಳು, ಋಷಿಗಳು, ಪಿತೃಗಳು, ಮಾನವರು ಮತ್ತು ಪ್ರಾಣಿಗಳು ಇವರೆಲ್ಲರಿಂದ ನಾವು ನಾನಾವಿಧದ ಉಪಕಾರಗಳನ್ನು ಪಡೆಯತ್ತೇವೆ. ಅವರ ಹಂಗಿಲ್ಲದೆ ಬದುಕುವ ಸಾಮರ್ಥ್ಯ ನಮಗಾರಿಗೂ ಇಲ್ಲವಾದ್ದರಿಂದ ಇವರೆಲ್ಲರ ಉಪಕಾರ ಸ್ಮರಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ.

ಈ ಸ್ಮರಣೆಯು ಕೇವಲ ಯಾಂತ್ರಿಕವಾಗಿರದೆ, ಅವುಗಳ ಮೂಲಕ ಭಗವಂತನ ಆರಾಧನೆಯಾಗಬೇಕು ಎಂದು ತಿಳಿಸುತ್ತವೆ ಶಾಸ್ತ್ರಗಳು. ಸ್ವಾಧ್ಯಾಯ ಮಾಡುವುದು, ಹವನ, ಶ್ರಾದ್ಧ, ಅನ್ನದಾನ ಮುಂತಾದವುಗಳು ಅರ್ಚನೆಗಳಾಗಿವೆ.

ಪ್ರತಿಯೊಬ್ಬನೂ ತನ್ನ ತಂದೆತಾಯಿಗಳಿಗೆ ಮಗನೆಂದು ಹೇಗೆ ಅನ್ನಿಸಿಕೊಳ್ಳುತ್ತಾನೆ? ಎಂಬ ಪ್ರಶ್ನೆಗೆ ಶಾಸ್ತ್ರೋಕ್ತವಾದ ಉತ್ತರ ಹೀಗಿದೆ:

"ಜೀವತೋ ವಾಕ್ಯಕರಣಾತ್ 
ಪ್ರತ್ಯಬ್ಧಂ ಭೂರಿಭೋಜನಾತ್ | 
ಗಯಾಯಾಂ ಪಿಂಡದಾನಾಚ್ಚತ್ರಿಭಿಃ ಪುತ್ರಸ್ಯ ಪುತ್ರತಾ ||" 

ತಂದೆತಾಯಿಗಳು ಬದುಕಿರುವಾಗ ಅವರ ಧರ್ಮಸಮ್ಮತವಾದ ಮಾತುಗಳನ್ನು ನಡೆಸಿಕೊಡುತ್ತಾ ಸಂತೋಷಪಡಿಸಬೇಕು.

 ಮೃತರಾದ ಮೇಲೆ ಪ್ರತಿವರ್ಷ ಅವರ ಶ್ರಾದ್ಧವನ್ನು ತರ್ಪಣವನ್ನು ಭಕ್ತಿಯಿಂದ ಮಾಡಬೇಕು.

 ವಿಷ್ಣುಪಾದವಿರುವ ಗಯಾಕ್ಷೇತ್ರದಲ್ಲಿ ....ಕಾಶಿಯಲ್ಲಿ... ಪ್ರಯಾಗರಾಜನ ತ್ರಿವೇಣಿ ಸಂಗಮದ ಕ್ಷೇತ್ರದಲ್ಲಿ .... ವಿಶೇಷ ಕ್ಷೇತ್ರಗಳಲ್ಲಿ ಒಮ್ಮೆಯಾದರೂ ಪಿತೃತೃಪ್ತಿಗಾಗಿ ಪಿಂಡದಾನ ಮಾಡಬೇಕು. ಈ ಮೂರು ಕರ್ಮಗಳಿಂದಾಗಿ 'ಪುತ್ರ' ಎನಿಸಬಲ್ಲ.

  ಹೀಗಾಗಿ ಪಿತೃದೇವತೆಗಳ ಪ್ರೀತಿಯನ್ನು  ಉದ್ದೇಶಿಸಿ, ಮೃತರಾದ ತಂದೆತಾಯಿಗಳ ಶ್ರಾದ್ಧವನ್ನು ಶ್ರದ್ಧೆಯಿಂದ ಆಚರಿಸಬೇಕಾದುದು ಮಗನ ಮುಖ್ಯಕರ್ತವ್ಯ.  ಇದು ಪಿತೃಯಜ್ಞ. 

ತಂದೆತಾಯಿ ಮೃತರಾದ  ದಿನದಂದು ತಿಥಿಯನುಸಾರ ಪ್ರತಿವರ್ಷ ಮಾಡುವ ಶ್ರಾದ್ಧ ಕಾಲಶ್ರಾದ್ಧ.

 ಇನ್ನೊಂದು ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ, ಮೃತರಾದ ಸಮಸ್ತಬಂಧು, ಬಳಗ, ಮಿತ್ರ, ಗುರು ಮೊದಲಾದ ಎಲ್ಲರನ್ನೂ ಉದ್ದೇಶಿಸಿ ಅವರೆಲ್ಲರಿಗೂ ಪಿಂಡಪ್ರದಾನಗಳನ್ನು ಮಾಡುವುದು ಮಹಾಲಯ ಶ್ರಾದ್ಧ.

ತಾನು ಪ್ರತ್ಯಕ್ಷವಾಗಿ ಕಂಡಿದ್ದ, ಕಂಡಿರದ ಬಂಧುಬಳಗದವರಲ್ಲಿ ಬ್ರಹ್ಮಚಾರಿಯಾಗಿಯೇ ಮೃತರಾದವರಿಗೂ, ಕನ್ಯಾವಸ್ಥೆಯಲ್ಲಿ ಸತ್ತವರಿಗೂ, ಅಪಘಾತದಿಂದ ಮಡಿದವರಿಗೂ, ಕರ್ಮವನ್ನು ಮಾಡಲು ಅಧಿಕಾರಿಗಳೇ ಇಲ್ಲದಂತಹವರಿಗೂ ಪಿಂಡಪ್ರದಾನ ಮಾಡಿ ತೃಪ್ತಿಪಡಿಸುವ ಕ್ರಿಯೆ ಮಹಾಲಯಶ್ರಾದ್ಧ.

 ಅಲ್ಲದೆ ಜನ್ಮತಃ ದಿವ್ಯಾಂಗರಾಗಿ ಹುಟ್ಟಿ ಮೃತರಾದವರಿಗೂ, ಬೆಂಕಿ, ವಿದ್ಯುತ್, ಆಯುಧಗಳಿಂದ ಅಪಘಾತಗಳಿಂದ ಅಥವಾ ಮತ್ತಾವುದೇ ರೀತಿಯಿಂದ ದುರ್ಮರಣ ಹೊಂದಿದವರಿಗೂ, ಹೀಗೆ ಎಲ್ಲರ ಉದ್ಧಾರ ಮತ್ತು ತೃಪ್ತಿಗಾಗಿ ಅವರೆಲ್ಲರಿಗೂ ಧರ್ಮಪಿಂಡಗಳನ್ನು ಇಟ್ಟು ತೃಪ್ತಿಪಡಿಸುವ ಕ್ರಿಯೆ ಮಹಾಲಯಶ್ರಾದ್ಧ. 

ಮನುಷ್ಯನ ಮರಣಾನಂತರ ಮಾಡುವ ಈ ವಿಧಾನದಲ್ಲಿ ಕಣ್ಣಿಗೆ ಕಾಣಿಸದಿರುವ ಆತನ ನಾಮ, ಗೋತ್ರವನ್ನು ಹೇಳಿ ಭೂಮಿಯಲ್ಲಿ ಶ್ರಾದ್ಧ ಮಾಡಿದರೆ ಎಲ್ಲೋ ಇರುವ ಆತನಿಗೆ ಹೇಗೆ ಸಲ್ಲುತ್ತದೆ? 
ಎಂಬ ಪ್ರಶ್ನೆಗೆ ಶಾಸ್ತ್ರವು ಸಮಂಜಸವಾದ ಉತ್ತರ ನೀಡಿದೆ:-

ಭಗವಂತನು ಪ್ರದ್ಯುಮ್ನ, ಸಂಕರ್ಷಣ, ವಾಸುದೇವ ಎಂಬ ತನ್ನ ರೂಪಗಳಿಂದ ಪಿತೃದೇವತೆಗಳಲ್ಲಿ ಅಂತರ್ಗತನಾಗಿ ಇದ್ದು, ಈ ಪಿಂಡಪ್ರದಾನವೆಂಬ ಪೂಜೆಯನ್ನು ಸ್ವೀಕರಿಸಿ ತೃಪ್ತನಾಗುತ್ತಾನೆ. ಮೃತರಾದ ನಮ್ಮ ಸಂಬಂಧಿಕರು ಪಶು, ಪಕ್ಷಿ, ಮಾನವ ಹೀಗೆ ಯಾವ ಯೋನಿಯಲ್ಲಿ ಜನಿಸಿದ್ದರೂ ಅವರವರಿಗೆ ಯೋಗ್ಯವಾದ ಆಹಾರ-ನೀರು ಸಿಗುವಂತೆ ಮಾಡಿ ಅನುಗ್ರಹಿಸುತ್ತಾನೆ. ಇದು ಆ ಭಗವಂತನು ಮಾಡಿದ ಅದ್ಭುತ ವ್ಯವಸ್ಥೆ.
ಶ್ರದ್ಧೆಯಿಂದ ಮಾಡುವ ಕಾರ್ಯವೇ  ಶ್ರಾದ್ಧ ಎನಿಸುತ್ತದೆ...
ಒಳ್ಳೆಯ ಭಾವನೆಯಿಂದ ಮಾಡಿದ ಎಲ್ಲಾ ಕಾರ್ಯಗಳು ಕೂಡ ಭಗವಂತನ ಅನುಗ್ರಹಕ್ಕೆ ಪಾತ್ರವಾಗುತ್ತದೆ 

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564

ಹಿರಣ್ಯ ಕಶ್ಯಪವಿನ ಮರಣ ನಂತರ ನರಸಿಂಹ ದೇವರಲ್ಲಿ ಪ್ರಹಲ್ಲಾದನು ಮೊದಲು ಬೇಡುವವರ ತಂದೆಗೆ ಸದ್ಗತಿ

ಕಠೋಪನಿಷತ್ತಿನಲ್ಲಿ ನಚಿಕೇತನು ಯಮದೇವರಲ್ಲಿ ಬೇಡುವ ಮೊದಲ ವರವು ಕೂಡ ತಂದೆಗೆ ಒಳ್ಳೆಯದನ್ನೇ

ಇಚ್ಚಾ ಮರಣಿಯಾದ ಭೀಷ್ಮನು ತಂದೆಗಾಗಿಯೇ ಅಖಂಡ ಬ್ರಹ್ಮಚಾರಿ ವ್ರತವನ್ನು ಸ್ವೀಕರಿಸುತ್ತಾನೆ

ವಿಠ್ಠಲನು ಇಟ್ಟಿಗೆಯ ಮೇಲೆ ನಿಂತದ್ದು ಪುಂಡಲೀಕನ ಪಿತೃ ಭಕ್ತಿ ಗಾಗಿ

ಯಾವ ಅಷ್ಟಾದಶ ಪುರಾಣಗಳನ್ನು ತೆಗೆದು ನೋಡಿದರೂ ಹಿರಿಯರಿಗೆ ತಂದೆ ತಾಯಿಗಳಿಗೆ ಮಾಡಿದ ಸೇವೆಯೇ ದೇವರ ಸೇವೆಯಷ್ಟೇ ಆರಾಧನೆ ಎಂಬುದನ್ನು ಇತಿಹಾಸ ತೋರಿಸುತ್ತದೆ

"ಯದ್ಭಾವಂ ತದ್ಭವತಿ"

ಈ ಶ್ರಾದ್ಧಕ್ರಿಯೆಯಿಂದ ಸಂತೋಷಗೊಂಡ ಪಿತೃದೇವತೆಗಳು ಶ್ರಾದ್ಧಕರ್ತೃಗಳಿಗೆ, ಅವರ ಕುಟುಂಬಕ್ಕೆ ಸಕಲವಿಧವಾದ ಮಂಗಳ ಉಂಟಾಗುವಂತೆ ಆಶೀರ್ವದಿಸುತ್ತಾರೆ. ಇದರಿಂದ ಯಜಮಾನನ ಕುಟುಂಬಕ್ಕೆ ಸಕಲವಿಧ ಕ್ಷೇಮ-ಅಭಿವೃದ್ಧಿ ನಿಶ್ಚಿತ. ಹೀಗಾಗಿ ಜನ್ಮ ಕೊಟ್ಟು ಸಾಕಿ ಸಲಹಿದ ಪಿತೃಗಳಿಗೆ ಉಪಕಾರಸ್ಮರಣೆಯಿಂದ ಮಾಡಬೇಕಾದ ಶ್ರಾದ್ಧಕಾರ್ಯ ಮಕ್ಕಳ ಮುಖ್ಯ ಕರ್ತವ್ಯವಾಗಿದೆ. ಭಾದ್ರಪದ ಮಾಸದ ಕೃಷ್ಣಪಕ್ಷದಲ್ಲಿ 15 ದಿನಗಳಲ್ಲಿ ಒಂದು ದಿನವಾದರೂ ಮೃತ ತಂದೆತಾಯಿಗಳ ಶ್ರಾದ್ಧವನ್ನು ಅಥವಾ ತರ್ಪಣವನ್ನು ಶ್ರದ್ಧೆಯಿಂದ ಮಾಡಿ ಕೃತಜ್ಞತೆ ಸಲ್ಲಿಸೋಣ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಹಬ್ಬದ ಸಂದರ್ಭದಲ್ಲೆ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ : ರಾಜ್ಯದಲ್ಲಿ ಗಗನಕ್ಕೇರಿದ ಅಕ್ಕಿ, ತೊಗರಿಬೇಳೆ ಬೆಲೆ!GOOD NEWS : 'KSRTC' ಯಿಂದ ದಸರಾ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್: 3,000ಕ್ಕೂ ಹೆಚ್ಚು ವಿಶೇಷ ಬಸ್‌ಗಳ ಸಂಚಾರ!ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!