LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಅ. 1ರೊಳಗೆ KYC ಪೂರ್ಣಗೊಳಿಸದಿದ್ದರೆ ‘ಗ್ಯಾಸ್ ಸಿಲಿಂಡರ್’ ಬಂದ್ ಆಗುತ್ತಾ..! ಇಲ್ಲಿದೆ ಕಂಪನಿಗಳ ಸ್ಪಷ್ಟನೆ

ಮನೆಯಲ್ಲೇ LPG ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಬಿಗ್ ಅಲರ್ಟ್. ಗ್ಯಾಸ್ e-KYC ಪೂರ್ಣಗೊಳಿಸಲು ಅಕ್ಟೋಬರ್ 1ರವರೆಗೆ ಮಾತ್ರ ಗಡುವು ಇದೆ. ಈ ಅವಧಿಯೊಳಗೆ e-KYC ಪೂರ್ಣಗೊಳಿಸದಿದ್ದರೆ ಗ್ಯಾಸ್ ಪೂರೈಕೆಯಲ್ಲಿ ತೊಂದರೆ ಎದುರಾಗುವ ಸಾಧ್ಯತೆ ಇದೆ ಎಂಬ ಆತಂಕ ಗ್ರಾಹಕರಲ್ಲಿದೆ. ಹೀಗಾಗಿ ಗ್ರಾಹಕರು ಕೂಡಲೇ ತಮ್ಮ ಗ್ಯಾಸ್ e-KYC ಪೂರ್ಣಗೊಳಿಸುವುದು ಉತ್ತಮ.

ಮನೆಯಲ್ಲಿ LPG ಗ್ಯಾಸ್ ಸಿಲಿಂಡರ್ ಬಳಸುತ್ತಿರುವವರಿಗೆ ಮತ್ತೊಂದು ಮಹತ್ವದ ಮಾಹಿತಿ. ಗ್ಯಾಸ್ ಸಂಪರ್ಕ ಹೊಂದಿರುವವರು ಆಧಾರ್ e-KYC ಪೂರ್ಣಗೊಳಿಸಲು ಅಕ್ಟೋಬರ್ 1ರವರೆಗೆ ಗಡುವು ಇದೆ. ಅಷ್ಟರೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ದೊರೆಯುವ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜೊತೆಗೆ ಗ್ಯಾಸ್ ಬುಕ್ಕಿಂಗ್‌ನಲ್ಲೂ ಸಮಸ್ಯೆ ಎದುರಾಗಬಹುದು.

ಕೇಂದ್ರ ಸರ್ಕಾರ ಗ್ಯಾಸ್ e-KYCಯನ್ನು ಕಡ್ಡಾಯಗೊಳಿಸಿದೆ. KYC ಪೂರ್ಣಗೊಳಿಸದವರಿಗೆ ಗ್ಯಾಸ್ ಬುಕ್ ಮಾಡಲು ಅವಕಾಶ ಇರುವುದಿಲ್ಲ ಹಾಗೂ ಸಿಲಿಂಡರ್ ಪೂರೈಕೆ ಕೂಡ ಸ್ಥಗಿತಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಸ್ಪಷ್ಟನೆ ನೀಡಿವೆ.

ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತವಾಗುತ್ತದೆಯೇ?

e-KYC ಪೂರ್ಣಗೊಳಿಸದವರ ಗ್ಯಾಸ್ ಸಿಲಿಂಡರ್ ಪೂರೈಕೆ ಸ್ಥಗಿತಗೊಳ್ಳಲಿದೆ ಎಂಬ ಪ್ರಚಾರದಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ಸ್ಪಷ್ಟಪಡಿಸಿವೆ. ಪೆಟ್ರೋಲಿಯಂ ಸಚಿವಾಲಯದಿಂದ ಈ ರೀತಿಯ ಯಾವುದೇ ಆದೇಶ ಬಂದಿಲ್ಲ ಎಂದು ಅವು ತಿಳಿಸಿವೆ.

ಆದರೆ ಆಧಾರ್ KYC ಪೂರ್ಣಗೊಳಿಸದಿದ್ದರೆ ಗ್ಯಾಸ್ ಸಬ್ಸಿಡಿ ಸ್ಥಗಿತಗೊಳ್ಳಬಹುದು ಎಂದು ತಿಳಿಸಲಾಗಿದೆ. ವಿಶೇಷವಾಗಿ ಪ್ರಧಾನಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳಿಗೆ ಕೇಂದ್ರ ಸರ್ಕಾರದಿಂದ ದೊರೆಯುವ ₹300 ಸಬ್ಸಿಡಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ಗ್ಯಾಸ್ ಪೂರೈಕೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರ e-KYC ಪ್ರಕ್ರಿಯೆಯನ್ನು ಜಾರಿಗೆ ತಂದಿದೆ. ಒಬ್ಬ ವ್ಯಕ್ತಿ ಎರಡು ಗ್ಯಾಸ್ ಸಂಪರ್ಕಗಳನ್ನು ಬಳಸುವುದು, ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಸಬ್ಸಿಡಿ ಪಡೆಯುವುದು ಸೇರಿದಂತೆ ಅಕ್ರಮಗಳನ್ನು ತಡೆಯಲು ಈ ಪ್ರಕ್ರಿಯೆಯನ್ನು ಕಡ್ಡಾಯಗೊಳಿಸಲಾಗಿದೆ.

ದೇಶೀಯ ಗ್ಯಾಸ್ ಸಿಲಿಂಡರ್ ಬಳಸುವ ಗ್ರಾಹಕರಷ್ಟೇ ಅಲ್ಲದೆ, ಸಾಮಾನ್ಯ ಸಬ್ಸಿಡಿ ರಹಿತ (Non-Subsidy) ಸಿಲಿಂಡರ್ ಬಳಸುವವರೂ KYC ಪೂರ್ಣಗೊಳಿಸಬೇಕು. ಇನ್ನು ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಆಧಾರ್ e-KYC ಅಗತ್ಯವಿಲ್ಲ.

ಗ್ಯಾಸ್ e-KYC ಮಾಡುವುದು ಹೇಗೆ?

ಗೃಹ ಬಳಕೆಯ ಗ್ಯಾಸ್ ಗ್ರಾಹಕರು KYC ಪೂರ್ಣಗೊಳಿಸಲು ಕಡ್ಡಾಯವಾಗಿ ಗ್ಯಾಸ್ ಏಜೆನ್ಸಿಗೆ ತೆರಳಬೇಕಿಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್ ಮೂಲಕ e-KYC ಪೂರ್ಣಗೊಳಿಸಬಹುದು.

  • Indane Gas ಗ್ರಾಹಕರು IndianOil ONE ಆ್ಯಪ್ ಮೂಲಕ KYC ಮಾಡಬಹುದು.

  • HP Gas ಗ್ರಾಹಕರು HP Gas ಆ್ಯಪ್ ಮೂಲಕ KYC ಪೂರ್ಣಗೊಳಿಸಬಹುದು.

  • Bharat Gas ಗ್ರಾಹಕರು Bharatgas ಆ್ಯಪ್ ಮೂಲಕ KYC ಮಾಡಬಹುದು.

ಇದಕ್ಕಾಗಿ Aadhaar RD ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಮುಖ ಸ್ಕ್ಯಾನ್ ಮಾಡಬೇಕಾಗುತ್ತದೆ. ಮೊಬೈಲ್ ನಂಬರ್ ಮತ್ತು ಗ್ಯಾಸ್ ಸಂಪರ್ಕದ ವಿವರಗಳು ಅಗತ್ಯವಿರುತ್ತವೆ.

ಆಫ್‌ಲೈನ್‌ನಲ್ಲೂ KYC ಮಾಡಬಹುದು

ಆನ್‌ಲೈನ್ ಮೂಲಕ KYC ಮಾಡಲು ಸಾಧ್ಯವಾಗದವರು ಸಮೀಪದ ಗ್ಯಾಸ್ ಏಜೆನ್ಸಿಗೆ ತೆರಳಿ ಆಧಾರ್ ಕಾರ್ಡ್ ಮತ್ತು ಗ್ಯಾಸ್ ಪಾಸ್‌ಬುಕ್ ನೀಡಿ KYC ಪ್ರಕ್ರಿಯೆ ಪೂರ್ಣಗೊಳಿಸಬಹುದು.

ಇದಲ್ಲದೆ, ಗ್ಯಾಸ್ ಸಿಲಿಂಡರ್ ಡೆಲಿವರಿ ಮಾಡಲು ಬರುವ ಡೆಲಿವರಿ ಬಾಯ್ ಬಳಿ ಇರುವ ಬಯೋಮೆಟ್ರಿಕ್ ಯಂತ್ರದ ಮೂಲಕವೂ KYC ಪೂರ್ಣಗೊಳಿಸುವ ಅವಕಾಶವಿದೆ. ಹೀಗಾಗಿ ಗ್ರಾಹಕರು ಆನ್‌ಲೈನ್, ಗ್ಯಾಸ್ ಏಜೆನ್ಸಿ ಅಥವಾ ಡೆಲಿವರಿ ಬಾಯ್‌ನ ಬಯೋಮೆಟ್ರಿಕ್ ಸಾಧನ—ಈ ಮೂರು ವಿಧಾನಗಳಲ್ಲಿ ಯಾವುದಾದರೂ ಒಂದನ್ನು ಬಳಸಿಕೊಂಡು ಆಧಾರ್ KYC ಪೂರ್ಣಗೊಳಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?BREAKING: ಇನ್ಮುಂದೆ ವೃತ್ತಿಪರ ಕೋರ್ಸ್ ಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮೀಸಲಾತಿ: ರಾಜ್ಯ ಸರ್ಕಾರ ಅಧಿಕೃತ ಆದೇಶGOOD NEWS: ಗೃಹಜ್ಯೋತಿ ಫಲಾನುಭವಿಗಳಿಗೆ ಗುಡ್ ನ್ಯೂಸ್: ಮಾಹಿತಿ ದಾಖಲಿಸಲು ಅವಧಿ ವಿಸ್ತರಣೆ!ಗ್ರಾಹಕರಿಗೆ ಜಿಯೋ ಭರ್ಜರಿ ಆಫರ್: 1,499 ರೂ. JioBharat ಫೋನ್ ನೊಂದಿಗೆ 6 ತಿಂಗಳ ಉಚಿತ ರೀಚಾರ್ಜ್BREAKING: ಇನ್ಮುಂದೆ ಔಷಧಿ ಬಿಲ್‌ನಲ್ಲಿ ಮೂಲ ಬೆಲೆ, MRP ವಿವರ ಕಡ್ಡಾಯ: ರಾಜ್ಯ ಸರ್ಕಾರದ ಹೊಸ ಮಾರ್ಗಸೂಚಿ!CJP ಪ್ರತಿಭಟನೆ: 3,000ಕ್ಕೂ ಹೆಚ್ಚು ಜನರ ಬಂಧನ; ದೇಶದಲ್ಲೀಗ ಅಘೋಷಿತ ತುರ್ತು ಪರಿಸ್ಥಿತಿ ಎಂದ ಸೋನಮ್ ವಾಂಗ್ ಚುಕ್