LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

1 ವರ್ಷದ FDಗೆ ₹5 ಲಕ್ಷ ಹೂಡಿಕೆ ಮಾಡ್ತೀರಾ? ಯಾವ ಬ್ಯಾಂಕ್ ಹೆಚ್ಚು ರಿಟರ್ನ್ಸ್ ಕೊಡುತ್ತದೆ ನೋಡಿ

ಅಚಾನಕ್ಕಾಗಿ ನಿಮ್ಮ ಕೈಗೆ ದೊಡ್ಡ ಮೊತ್ತದ ಹಣ ಬಂದಿದೆಯಾ? ಸದ್ಯಕ್ಕೆ ಆ ಹಣದ ತುರ್ತು ಅಗತ್ಯ ನಿಮಗಿಲ್ಲದಿದ್ದರೆ ಅದನ್ನ ಸರಿಯಾದ ಜಾಗದಲ್ಲಿ ಹೂಡಿಕೆ (Investment) ಮಾಡುವುದು ಅತ್ಯಂತ ಬುದ್ಧಿವಂತಿಕೆಯ ಲಕ್ಷಣ. ನೀವು ಯಾವುದೇ ರೀತಿಯ ಮಾರುಕಟ್ಟೆಯ ರಿಸ್ಕ್ ತೆಗೆದುಕೊಳ್ಳಲು ಇಷ್ಟಪಡದಿದ್ದರೆ, ಬ್ಯಾಂಕುಗಳ ಫಿಕ್ಸ್ಡ್ ಡೆಪಾಸಿಟ್ ಅಥವಾ ಎಫ್‌ಡಿ ನಿಮಗೆ ಬೆಸ್ಟ್ ಆಪ್ಷನ್ ಆಗಬಹುದು.

ಏಕೆಂದರೆ ಇಲ್ಲಿ ಮಾರುಕಟ್ಟೆಯ ಏರಿಳಿತಗಳ ಭಯ ಇರಲ್ಲ, ನಿಮ್ಮ ಕಷ್ಟದ ದುಡ್ಡು ಬ್ಯಾಂಕಿನಲ್ಲಿ ನೂರಕ್ಕೆ ನೂರು ಸೇಫ್ ಆಗಿ ಇರುತ್ತೆ ಮತ್ತು ಮೊದಲೇ ನಿಗದಿಪಡಿಸಿದಂತೆ ಪಕ್ಕಾ ಬಡ್ಡಿ ಲಾಭ ಕೂಡ ಕೈ ಸೇರುತ್ತದೆ. ನಿಮ್ಮ ಬಳಿ ಇರೋ ಹಣವನ್ನು ಎಫ್‌ಡಿ ಮಾಡುವ ಮುನ್ನ ವಿವಿಧ ಬ್ಯಾಂಕುಗಳ ಇಂದಿನ ಬಡ್ಡಿದರ ಮತ್ತು ಒಂದು ವರ್ಷದ ನಂತರ ನಿಮಗೆ ಸಿಗಲಿರುವ ಲಾಭ ಎಷ್ಟು ಎಂದು ತಿಳಿದುಕೊಳ್ಳನ

ಕೇವಲ 0.10% ವ್ಯತ್ಯಾಸವೂ ದೊಡ್ಡ ಪರಿಣಾಮ ಬೀರುತ್ತೆ

ನಿಮ್ಮ ಬಳಿ ಇರುವ ₹5 ಲಕ್ಷ ರೂಪಾಯಿಗಳನ್ನು ಕೇವಲ ಒಂದು ವರ್ಷದ ಅವಧಿಗೆ ಸುರಕ್ಷಿತವಾಗಿ ಇಡಲು ಪ್ಲಾನ್ ಮಾಡುತ್ತಿದ್ದರೆ, ಹೂಡಿಕೆ ಮಾಡುವ ಮುನ್ನ ಬೇರೆ ಬೇರೆ ಬ್ಯಾಂಕುಗಳ ಬಡ್ಡಿದರಗಳನ್ನು (Interest Rates) ಹೋಲಿಕೆ ಮಾಡಿ ನೋಡುವುದು ಅತ್ಯಗತ್ಯ. ಏಕೆಂದರೆ ಬಡ್ಡಿದರದಲ್ಲಿ ಕಂಡುಬರುವ ಕೇವಲ ಶೇ. 0.10 ರಷ್ಟು ಸಣ್ಣ ವ್ಯತ್ಯಾಸವೂ ಸಹ ನಿಮ್ಮ ಮೆಚ್ಯೂರಿಟಿ ಅವಧಿ ಮುಗಿದ ನಂತರ ಕೈಗೆ ಸಿಗುವ ಒಟ್ಟು ಲಾಭದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ಸಾಮಾನ್ಯವಾಗಿ ಬ್ಯಾಂಕುಗಳಲ್ಲಿ 7 ದಿನಗಳಿಂದ ಹಿಡಿದು 10 ವರ್ಷಗಳ ಅವಧಿಯವರೆಗೆ ಎಫ್‌ಡಿ ಇಡಲು ಅವಕಾಶವಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇರುವುದಿಲ್ಲ.ದೇಶದ ಪ್ರಮುಖ ಸರ್ಕಾರಿ, ಖಾಸಗಿ ಹಾಗೂ ಸ್ಮಾಲ್ ಫೈನಾನ್ಸ್ ಬ್ಯಾಂಕುಗಳ ಒಂದು ವರ್ಷದ ಅವಧಿಯ ಎಫ್‌ಡಿ ಬಡ್ಡಿದರಗಳ ಸಂಪೂರ್ಣ ಹೋಲಿಕೆ ಇಲ್ಲಿದೆ:

ಸರ್ಕಾರಿ ಬ್ಯಾಂಕುಗಳು (Public Sector Banks)


ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 1 ವರ್ಷದ ಎಫ್‌ಡಿ ಮೇಲೆ ಸಿಗುವ ಬಡ್ಡಿದರಗಳು:

ಬ್ಯಾಂಕ್ ಆಫ್ ಇಂಡಿಯಾ (BOI): 6.50% ವಾರ್ಷಿಕ ಬಡ್ಡಿ

ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (IOB): 6.50% ವಾರ್ಷಿಕ ಬಡ್ಡಿ

ಬ್ಯಾಂಕ್ ಆಫ್ ಮಹಾರಾಷ್ಟ್ರ: 6.40% ವಾರ್ಷಿಕ ಬಡ್ಡಿ

ಕೆನರಾ ಬ್ಯಾಂಕ್ / SBI / PNB / BOB: 6.25% ವಾರ್ಷಿಕ ಬಡ್ಡಿ

ಖಾಸಗಿ ಬ್ಯಾಂಕುಗಳು (Private Banks)

ಸರ್ಕಾರಿ ಬ್ಯಾಂಕುಗಳಿಗಿಂತ ಸ್ವಲ್ಪ ಹೆಚ್ಚಿನ ಲಾಭ ನೀಡುವ ಪ್ರಮುಖ ಖಾಸಗಿ ಬ್ಯಾಂಕುಗಳು:

ಎಸ್‌ಬಿಎಂ ಬ್ಯಾಂಕ್ ಇಂಡಿಯಾ (SBM): 7.10% ವಾರ್ಷಿಕ ಬಡ್ಡಿ

ಬಂಧನ್ ಬ್ಯಾಂಕ್ / ಆರ್‌ಬಿಎಲ್ (RBL): 7.00% ವಾರ್ಷಿಕ ಬಡ್ಡಿ

ಡಿಸಿಬಿ ಬ್ಯಾಂಕ್ (DCB): 6.90% ವಾರ್ಷಿಕ ಬಡ್ಡಿ

ಜಮ್ಮು ಅಂಡ್ ಕಾಶ್ಮೀರ ಬ್ಯಾಂಕ್ / ತಮಿಳುನಾಡು ಮರ್ಕೆಂಟೈಲ್: 6.80% ವಾರ್ಷಿಕ ಬಡ್ಡಿ

ಇಂಡಸ್ ಇಂಡ್ ಬ್ಯಾಂಕ್ (IndusInd): 6.75% ವಾರ್ಷಿಕ ಬಡ್ಡಿ

ಸ್ಮಾಲ್ ಫೈನಾನ್ಸ್ ಬ್ಯಾಂಕುಗಳು (Small Finance Banks)

ಎಲ್ಲಕ್ಕಿಂತ ಗರಿಷ್ಠ ಮಟ್ಟದ ಬಡ್ಡಿ ಆದಾಯ ನೀಡುವ ಬ್ಯಾಂಕುಗಳು:

ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.25% ವಾರ್ಷಿಕ ಬಡ್ಡಿ

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.25% ವಾರ್ಷಿಕ ಬಡ್ಡಿ

ಇಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.10% ವಾರ್ಷಿಕ ಬಡ್ಡಿ

ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 7.00% ವಾರ್ಷಿಕ ಬಡ್ಡಿ

ಗ್ರಾಹಕರು ಗಮನಿಸಬೇಕಾದ ಒಂದು ಅತ್ಯಂತ ಮುಖ್ಯವಾದ ಆರ್ಥಿಕ ಸೂತ್ರ (Financial Rule) ಇದೆ. ಕೇವಲ ಮಾರುಕಟ್ಟೆಯಲ್ಲಿ ಯಾವ ಬ್ಯಾಂಕ್ ಅತಿ ಹೆಚ್ಚು ಬಡ್ಡಿ ನೀಡುತ್ತದೆ ಎಂಬುದನ್ನು ಮಾತ್ರ ನೋಡಿ ತರಾತುರಿಯಲ್ಲಿ ಹಣವನ್ನು ಡೆಪಾಸಿಟ್ ಇಡಬೇಡಿ. ಹೂಡಿಕೆ ಮಾಡುವ ಮುನ್ನ ಆಯಾ ಬ್ಯಾಂಕಿನ ವಿಶ್ವಾಸಾರ್ಹತೆ, ಮಾರುಕಟ್ಟೆಯ ಇತಿಹಾಸ ಮತ್ತು ಅದರ ಆರ್ಥಿಕ ಸ್ಥಿರತೆ ಎಷ್ಟರಮಟ್ಟಿಗೆ ಗಟ್ಟಿಯಾಗಿದೆ ಎಂಬುದನ್ನು ಪಕ್ಕಾ ಕನ್ಫರ್ಮ್ ಮಾಡಿಕೊಳ್ಳುವುದು ನಿಮ್ಮ ಹಣದ ಸುರಕ್ಷತೆಗೆ ಅತ್ಯಂತ ಒಳ್ಳೆಯದು

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಇಂದಿನಿಂದ ಸೊರಬದ ಚಂದ್ರಗುತ್ತಿಯಲ್ಲಿ ಶರನ್ನವರಾತ್ರಿ ಹಾಗೂ ವಿಜಯದಶಮಿ ಉತ್ಸವ ಆರಂಭBIG NEWS : ಭಕ್ತರ ಗಮನಕ್ಕೆ : ಚಾಮುಂಡಿ ಬೆಟ್ಟದಲ್ಲಿ ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಸಾರ್ವಜನಿಕ ದರ್ಶನಕ್ಕೆ ಬ್ರೇಕ್!BREAKING : ಬೆಳಗಾವಿಯಲ್ಲಿ 40ಕ್ಕೂ ಹೆಚ್ಚು ಪಬ್ ಗಳ ಮೇಲೆ ಪೊಲೀಸರಿಂದ ರೇಡ್ : ದಾಳಿ ವೇಳೆ ಅಪ್ರಾಪ್ತರು ಪತ್ತೆ!BREAKING: 'ಗೃಹಜ್ಯೋತಿ' ಯೋಜನೆ ಮರುಪರಿಶೀಲನೆ ಗಡುವು ಅಕ್ಟೋಬರ್ 31ರವರೆಗೆ ವಿಸ್ತರಣೆ : ಇಂಧನ ಇಲಾಖೆ ಆದೇಶ!BIG NEWS : ಮನೆ ಮತ್ತು ಹೋಟೆಲ್ ಬಳಕೆಯ ತ್ಯಾಜ್ಯ ಎಣ್ಣೆ ಸಂಗ್ರಹಕ್ಕೆ ಹೊಸ ಮೊಬೈಲ್ ಆ್ಯಪ್ : ಸಚಿವ ಯುಟಿ ಖಾದರ್BIG NEWS : ಇಂದಿನಿಂದ ರಾಜ್ಯಾದ್ಯಂತ ಶರನ್ನವರಾತ್ರಿ ಆಚರಣೆBREAKING : ಸಂಕಷ್ಟದಲ್ಲಿರೋ ಸಾರಿಗೆ ನಿಗಮಗಳಿಗೆ ಹಣ ಬಿಡುಗಡೆ : 594 ಕೋಟಿ ಸಹಾಯಧನ ನೀಡಿದ ರಾಜ್ಯ ಸರ್ಕಾರBREAKING : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಇಂದು ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಚಾಲನೆ!‘ದೆಹಲಿಯಲ್ಲಿ ಅರಾಜಕತೆ ಸೃಷ್ಟಿಸಲು ದೊಡ್ಡ ಪಿತೂರಿ’: ಸಿಜೆಪಿ ಪ್ರತಿಭಟನೆ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕಿಡಿಸಾಗರದ ಕಲ್ಮನೆ–ಎಡಜಿಗಳಮನೆ ತಾಲ್ಲೂಕು ಪಂಚಾಯ್ತಿ ಕ್ಷೇತ್ರ: ಬಿಜೆಪಿಯಿಂದ 'ಸುರೇಶ್ ಶೆಟ್ಟಿ' ಸ್ಪರ್ಧೆ?